ಚಿಕ್ಕಮಗಳೂರು: ಧಾರಾಕಾರ ಮಳೆಗೆ ಇಲ್ಲಿನ ಐತಿಹಾಸಿಕ ಮದಗದ ಕೆರೆ ಏರಿ ಬಿರುಕು ಬಿಟ್ಟಿದೆ. ನೀರು ಹಾಯಿಸುವ ಬ್ಯಾರೇಜ್ ಬಳಿಯೂ ಬಿರುಕು ಕಾಣಿಸಿಕೊಂಡಿದೆ. ಕೋಡಿ ಬಳಿ ಏರಿಯ ಮಣ್ಣು ಕುಸಿದಿದೆ. ಕೆರೆ ಬಳಿಯ ಗುಡ್ಡದಲ್ಲೂ ಭೂ ಕುಸಿತ ಉಂಟಾಗಿದೆ. ಹೀಗಾಗಿ, ಅಪಾರ ಪ್ರಮಾಣದ ನೀರು ಹೊರಬರುತ್ತಿದೆ. ಜಿಲ್ಲೆಯಲ್ಲಿ ಜೋರು ಮಳೆಯಾಗುತ್ತಿದ್ದು ಅಪಾರ ಪ್ರಮಾಣದ ನೀರು ಕೆರೆಗೆ ಹರಿದು ಬರುತ್ತಿದೆ. ಕೆರೆ ಸುತ್ತಮುತ್ತಲಿರುವ ಗ್ರಾಮಗಳಲ್ಲಿ ಆತಂಕ ಮನೆ ಮಾಡಿದೆ.
ಮಳೆಯಬ್ಬರಕ್ಕೆ ಚಿಕ್ಕಮಗಳೂರಿನ ಐತಿಹಾಸಿಕ ಮದಗದ ಕೆರೆ ಕಟ್ಟೆಯಲ್ಲಿ ಬಿರುಕು - Madagada
ಕಡೂರು ತಾಲೂಕಿನ ಐತಿಹಾಸಿಕ ಮದಗದ ಕೆರೆ ಬಿರುಕು ಬಿಟ್ಟಿದೆ.
ಮದಗದ ಕೆರೆ ಬಿರುಕು