ಚಿಕ್ಕಮಗಳೂರು: ಬಿಸಿಲಿನ ಪ್ರತಾಪಕ್ಕೆ ಕಂಗೆಟ್ಟಿರುವ ಜನರಿಗೆ ಇಂದು ಸುರಿದ ಧಾರಾಕಾರ ಮಳೆ ತಂಪೆರೆಯುವುದರ ಜೊತೆಗೆ ಜಿಲ್ಲೆಯಲ್ಲಿ ಅವಾಂತರ ಸೃಷ್ಟಿಸಿದೆ.
ಮಳೆಯ ಜೊತೆಗೆ ಗುಡುಗು ಸಿಡಿಲು ಅಬ್ಬರಿಸಿದ್ದು, ಜನರನ್ನು ಬೆಚ್ಚಿ ಬೀಳಿಸುತ್ತಿದೆ. ಸಿಡಿಲು ಬಡಿದು ದಂಪತಿ ಸಾವನ್ನಪ್ಪಿರುವ ಘಟನೆ ತೇಗೂರು ಗ್ರಾಮದಲ್ಲಿ ನಡದಿದೆ. ಮಂಜುನಾಥ್ (50), ಭಾರತಿ (43) ಮೃತ ದಂಪತಿ.
ಇಬ್ಬರು ದನ ಮೇಯಿಸಿಕೊಂಡು ಗ್ರಾಮದ ಕೆರೆಯ ಏರಿ ಮೇಲೆ ಬರುವಾಗ ದಂಪತಿ ಸಿಡಿಲಿಗೆ ಬಲಿ ಆಗಿದ್ದಾರೆ. ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜಿಲ್ಲೆಯಲ್ಲಿ ಧಾರಾಕಾರ ಮಳೆ: ಸಿಡಿಲಿಗೆ ದಂಪತಿ ಬಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತ:
ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆ ಸುರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಜಿಲ್ಲೆಯಲ್ಲಿ ಕಗ್ಗತ್ತಲೆಯ ಕಾರ್ಮೋಡ ಆವರಿಸಿದೆ. ಇನ್ನೊಂದೆಡೆ ಬಿಸಿಲ ಧಗೆಗೆ ಬಸವಳಿದಿದ್ದ ಕಾಫಿನಾಡಿನ ಜನ ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ.