ಚಿಕ್ಕಮಗಳೂರು:ಕೇರಳ ರಾಜ್ಯದಲ್ಲಿ ಕೊರೊನಾ ವೈರಸ್ ಪತ್ತೆಯಾಗಿರುವ ಹಿನ್ನಲೆ ಜಿಲ್ಲೆಗೆ ಪ್ರವಾಸಕ್ಕೆಂದು ಆಗಮಿಸುವ ಕೇರಳ ಪ್ರವಾಸಿಗರನ್ನು ಕೂಡಲೇ ನಿರ್ಭಂಧಿಸಬೇಕು ಎಂದೂ ಆಗ್ರಹಿಸಿ ಶ್ರೀ ರಾಮ ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಕೊರೊನಾ ವೈರಸ್: ಕೇರಳ ಪ್ರವಾಸಿಗರನ್ನು ಕಾಫಿನಾಡಿಗೆ ಬರದಂತೆ ನಿರ್ಬಂಧಿಸಿ... ಡಿಸಿಗೆ ಮನವಿ - ಕರೋನ ವೈರಸ್ ಹರಡದಂತೆ ತಡೆಗಟ್ಟಲು ವಿಶ್ವದಾದ್ಯಂತ
ಕೇರಳ ರಾಜ್ಯದಲ್ಲಿ ಕೊರೊನಾ ವೈರಸ್ ಪತ್ತೆಯಾಗಿರುವ ಹಿನ್ನಲೆ ಜಿಲ್ಲೆಗೆ ಪ್ರವಾಸಕ್ಕೆಂದು ಆಗಮಿಸುವ ಕೇರಳ ಪ್ರವಾಸಿಗರನ್ನು ಕೂಡಲೇ ನಿರ್ಬಂಧಿಸಬೇಕೆಂದೂ ಆಗ್ರಹಿಸಿ ಶ್ರೀ ರಾಮ ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ರಿಗೆ ಮನವಿ ಸಲ್ಲಿಸಿದರು.
![ಕೊರೊನಾ ವೈರಸ್: ಕೇರಳ ಪ್ರವಾಸಿಗರನ್ನು ಕಾಫಿನಾಡಿಗೆ ಬರದಂತೆ ನಿರ್ಬಂಧಿಸಿ... ಡಿಸಿಗೆ ಮನವಿ Kn_Ckm_02_Dc_Manavi_av_7202347](https://etvbharatimages.akamaized.net/etvbharat/prod-images/768-512-5985751-thumbnail-3x2-mnd.jpg)
ಈಗಾಗಲೇ ಚೀನಾ ದೇಶದಲ್ಲಿ ಭಯಾನಕ ಹಾಗೂ ಮಾರಣಾಂತಿಕ ಕಾಯಿಲೆಯಾದ ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ವಿಶ್ವದಾದ್ಯಂತ ಮುನ್ನಚ್ಚೆರಿಕೆಯ ಕ್ರಮಗಳನ್ನು ವಹಿಸಲಾಗುತ್ತಿದೆ. ಈ ಭಯಾನಕ ವೈರಸ್ ಭಾರತಕ್ಕೂ ಕಾಲಿಟ್ಟಿರುವುದು ಕಂಡು ಬಂದಿದೆ. ಕೇರಳ ರಾಜ್ಯದಲ್ಲಿ ಹಲವಾರು ಜನರಲ್ಲಿ ಈ ವೈರಸ್ ಪತ್ತೆಯಾಗಿದ್ದು, ತಪಾಸಣೆಯ ವೇಳೆ ದೃಡಪಟ್ಟಿದೆ. ಹಾಗಾಗಿ ಚಿಕ್ಕಮಗಳೂರು ಜಿಲ್ಲೆಗೆ ಪ್ರವಾಸಕ್ಕೆಂದು ಬರುವ ಕೇರಳ ಪ್ರವಾಸಿಗರಿಂದ ಕಾಯಿಲೆ ಹರಡುವ ಸಾಧ್ಯತೆ ಹೆಚ್ಚಾಗಿರುವ ಹಿನ್ನಲೆ ಮುನ್ನಚ್ಚರಿಕೆಯ ಕ್ರಮವಾಗಿ ಪ್ರವಾಸಿಗರನ್ನು ನಿರ್ಬಂಧಿಸಬೇಕು ಎಂದೂ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಶ್ರೀರಾಮ ಸೇನೆಯ ಕಾರ್ಯಕರ್ತರು ಮನವಿ ಸಲ್ಲಿಸಿದರು.