ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು: ವರದಿ ಬರುವ ಮೊದಲೇ ಶಾಲೆಗೆ ಹಾಜರಾಗಿದ್ದ ಇಬ್ಬರು ಶಿಕ್ಷಕರಿಗೆ ಕೊರೊನಾ! - ಜೆ.ಎಂ.ಇ ಸ್ಕೂಲ್​ನ‌ ಇಬ್ಬರು ಶಿಕ್ಷಕರಿಗೆ ಕೊರೊನಾ

ಕೊರೊನಾ ಪರೀಕ್ಷೆಯ ವರದಿ ಬರುವ ಮೊದಲೇ ಶಾಲೆಗೆ ಹಾಜರಾಗಿದ್ದ ಮೂಡಿಗೆರೆ ತಾಲೂಕಿನ ಕಳಸದ ಜೆ.ಎಂ.ಇ ಸ್ಕೂಲ್​ನ‌ ಇಬ್ಬರು ಶಿಕ್ಷಕರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಘಟನೆಯಿಂದ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕ ಮೂಡಿಸಿದೆ.

Corona to the two teachers who attended the school before the report arrived
ವರದಿ ಬರುವ ಮೊದಲೇ ಶಾಲೆಗೆ ಹಾಜರಾಗಿದ್ದ ಇಬ್ಬರು ಶಿಕ್ಷಕರಿಗೆ ಕೊರೊನಾ!

By

Published : Jan 4, 2021, 4:40 PM IST

ಚಿಕ್ಕಮಗಳೂರು: ಕೊರೊನಾ ಪರೀಕ್ಷೆಯ ವರದಿ ಬರುವ ಮೊದಲೇ ಶಾಲೆಗೆ ಹಾಜರಾಗಿದ್ದ ಜಿಲ್ಲೆಯ ಇಬ್ಬರು‌ ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಮೂಡಿಗೆರೆ ತಾಲೂಕಿನ ಕಳಸದ ಜೆ.ಎಂ.ಇ ಸ್ಕೂಲ್​ನ‌ ಇಬ್ಬರು ಶಿಕ್ಷಕರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೊರೊನಾ ಪರೀಕ್ಷೆಯ ವರದಿ ಬರುವ ಮೊದಲೇ ಶಿಕ್ಷಕರು ಶಾಲೆಗೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಲೆಯನ್ನು ಬಂದ್ ಮಾಡಲಾಗಿದೆ. ಈ ಶಾಲೆಯಲ್ಲಿ 15 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ 13 ಶಿಕ್ಷಕರಿಗೆ ಕೊರೊನಾ ನೆಗೆಟಿವ್ ಬಂದಿದೆ.

ಶಾಲೆಯ ಆಡಳಿತ ಮಂಡಳಿ ಎಡವಟ್ಟಿನಿಂದ ಶಾಲೆಗೆ ಶಿಕ್ಷಕರು ಆಗಮಿಸಿದ್ದು, ಈ ಘಟನೆಯಿಂದ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕ ಮೂಡಿದೆ.

For All Latest Updates

ABOUT THE AUTHOR

...view details