ಕರ್ನಾಟಕ

karnataka

ETV Bharat / state

ಎರಡನೇ ಬಾರಿ ಟೆಸ್ಟ್​ನಲ್ಲೂ ಸಚಿವ ಸಿ. ಟಿ. ರವಿಗೆ ಪಾಸಿಟಿವ್: ಶೀಘ್ರ ಗುಣಮುಖರಾಗುವ ವಿಶ್ವಾಸ - chikkamagalur corona news

ಎರಡನೇ ಬಾರಿ ಕೋವಿಡ್​ ಪರೀಕ್ಷೆಗೆ ಒಳಪಟ್ಟ ಸಚಿವ ಸಿ. ಟಿ . ರವಿ ಅವರಿಗೆ ಫಲಿತಾಂಶ ಪಾಸಿಟಿವ್​ ಬಂದಿದೆ. ಈ ವೇಳೆ ಅವರ ಪತ್ನಿ ಪಲ್ಲವಿ, ಸಿಬ್ಬಂದಿ ವರ್ಗ, ಕಾರು ಚಾಲಕ ಹಾಗೂ ಗನ್​ ಮ್ಯಾನ್​ ಕೂಡ ಪರೀಕ್ಷೆಗೆ ಒಳಗಾಗಿದ್ದು ಅವರ ವರದಿ ನೆಗೆಟಿವ್​ ಬಂದಿದೆ.

ct ravi
ಸಿ. ಟಿ. ರವಿಗೆ ಪಾಸಿಟಿವ್​

By

Published : Jul 13, 2020, 2:28 PM IST

ಚಿಕ್ಕಮಗಳೂರು:ಜಿಲ್ಲಾ ಉಸ್ತುವಾರಿ ಸಚಿವ ಸಿ. ಟಿ. ರವಿ ಅವರಿಗೆ ಎರಡನೇ ಬಾರಿ ವರದಿಯಲ್ಲಿಯೂ ಕೂಡ ಕೊರೊನಾ ಪಾಸಿಟಿವ್ ಬಂದಿದ್ದು, ಸೂಕ್ತ ಚಿಕಿತ್ಸೆ ಪಡೆದು ಕೆಲಸಕ್ಕೆ ವಾಪಸ್​ ಆಗುವುದಾಗಿ ತಿಳಿಸಿದ್ದಾರೆ.

ಎರಡನೇ ಬಾರಿ ಕೋವಿಡ್​ ಪರೀಕ್ಷೆಗೆ ಒಳಪಟ್ಟ ಅವರಿಗೆ ಪಾಸಿಟಿವ್​ ಬಂದಿದೆ. ಈ ವೇಳೆ ಅವರ ಪತ್ನಿ ಪಲ್ಲವಿ, ಸಿಬ್ಬಂದಿ ವರ್ಗ, ಕಾರು ಚಾಲಕ ಹಾಗೂ ಗನ್​ ಮ್ಯಾನ್ ಕೂಡ ಕೋವಿಡ್​ ಪರೀಕ್ಷೆಗೆ ಒಳಗಾಗಿದ್ದು, ಅವರ ವರದಿ ನೆಗೆಟಿವ್​ ಬಂದಿದೆ.

ಸಿ. ಟಿ. ರವಿಗೆ ಪಾಸಿಟಿವ್​

ಈ ಕುರಿತಂತೆ ಫೇಸ್​ಬುಕ್​ನಲ್ಲಿ ಬರೆದುಕೊಂಡಿರುವ ಸಚಿವರು, ಥರ್ಡ್ ಅಂಪೈರ್ ಫಲಿತಾಂಶದಲ್ಲಿ ನನಗೆ ಪಾಸಿಟಿವ್ ಬಂದಿದೆ. ಆದರೆ ನನಗೆ ಯಾವುದೇ ರೀತಿಯ ತೊಂದರೆಯ ಲಕ್ಷಣವಿಲ್ಲ, ನಾನು ಸಹಜವಾಗಿದ್ದೇನೆ. ಸೂಕ್ತ ಚಿಕಿತ್ಸೆ ಪಡೆಯುತ್ತಾ ಇಲ್ಲಿಂದಲೇ ಕೆಲಸ ಮುಂದುವರಿಸಲಿದ್ದೇನೆ. ಆದಷ್ಟು ಬೇಗ ಗುಣಮುಖನಾಗಿ ನಿಮ್ಮೊಂದಿಗೆ ಕೆಲಸ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details