ಚಿಕ್ಕಮಗಳೂರು: ನನಗೆ ಕೊರೊನಾ ಇದೆ. ಯಾರು ಹತ್ತಿರ ಬರಬೇಡಿ ಎಂದೂ ವಿಚಿತ್ರವಾಗಿ ವ್ಯಕ್ತಿಯೊಬ್ಬ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಕೊರೊನಾ ಇದೆ ಹತ್ತಿರ ಬರಬೇಡಿ: ಬಡಾವಣೆ ಜನರನ್ನು ಬೆಚ್ಚಿ ಬೀಳಿಸಿದ ವ್ಯಕ್ತಿ - corona suspected hospitalize in chikkamagaluru
ಕೊರೊನಾ ಸೋಂಕು ತಗುಲಿದೆ. ಯಾರೂ ಹತ್ತಿರ ಬರಬೇಡಿ ಎಂದು ವ್ಯಕ್ತಿಯೊಬ್ಬ ವಿಚಿತ್ರವಾಗಿ ಕೂಗಾಡಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಆಶಾ ಕಾರ್ಯಕರ್ತೆಯರು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬಡಾವಣೆ ಜನರನ್ನು ಬೆಚ್ಚಿ ಬೀಳಿಸಿದ ವ್ಯಕ್ತಿ
ನಗರದ ಕಲ್ಲುದೊಡ್ಡಿ ಶಾಂತಿ ನಗರ ಬಡಾವಣೆಯಲ್ಲಿ ನಡೆದ ಘಟನೆಯಿಂದ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.
ಸ್ಥಳಕ್ಕೆ ಆಶಾ ಕಾರ್ಯಕರ್ತೆಯರು ಹಾಗೂ ಪೊಲೀಸರು ಭೇಟಿ ನೀಡಿದ್ದು, ಕೊರೊನಾ ಲಕ್ಷಣ ನನಗಿದೆ. ಕಾಪಾಡುವಂತೆ ಅಳಲು ತೋಡಿಕೊಂಡಿದ್ದಾನೆ. ನಂತರ ಈ ವ್ಯಕ್ತಿಯನ್ನು ಆ್ಯಂಬುಲೈನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು.