ಕರ್ನಾಟಕ

karnataka

ETV Bharat / state

ವಲಸೆ ಕಾರ್ಮಿಕರ ಆಗಮನದಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೋವಿಡ್ ಹೆಚ್ಚಳ: ಡಿಸಿ - ಜಿಲ್ಲಾಧಿಕಾರಿ ಕೆ ಎನ್​ ರಮೇಶ್

ಮೇ ತಿಂಗಳಲ್ಲಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆ ಹಾಗೂ ರಾಜ್ಯದಿಂದ ಚಿಕ್ಕಮಗಳೂರಿಗೆ ಬಂದವರ ಸಂಖ್ಯೆ ಸುಮಾರು 18,000. ಹಾಗಾಗಿ, ಜಿಲ್ಲೆಯಲ್ಲಿ ಸೋಂಕು ಹೆಚ್ಚಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

corona-spread-to-chikkamagaluru-district-by-migrant-workers
ಚಿಕ್ಕಮಗಳೂರು ಜಿಲ್ಲೆ

By

Published : Jun 11, 2021, 2:22 PM IST

ಚಿಕ್ಕಮಗಳೂರು:ವಿವಿಧ ಜಿಲ್ಲೆ ಹಾಗೂ ರಾಜ್ಯಗಳಿಗೆ ವಲಸೆ ಹೋಗಿದ್ದ ಕಾರ್ಮಿಕರು ಮರಳಿ ಜಿಲ್ಲೆಗೆ ಬಂದ ಪರಿಣಾಮ ಕೋವಿಡ್​ ಸೋಂಕು ಸಂಖ್ಯೆ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಅಧಿಕವಾದಾಗ ಅಲ್ಲಿಂದ ಬಂದ ಜನರು ಸೋಂಕು ಹೊತ್ತು ತಂದಿದ್ದಾರೆ. ಈವರೆಗೆ 18,000 ಜನರು ಜಿಲ್ಲೆಗೆ ಮರಳಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ಎನ್​.ರಮೇಶ್​ ಹೇಳಿದರು.

ವಲಸೆ ಕಾರ್ಮಿಕರ ಆಗಮನದಿಂದ ಚಿಕ್ಕಮಗಳೂರು ಜಿಲ್ಲೆಗೆ ಕೋವಿಡ್​​ ಬಿಸಿ ತಟ್ಟಿದೆ

ರಾಜ್ಯದಲ್ಲಿ ಸೋಂಕಿತರು ಹೆಚ್ಚಿರುವ ಜಿಲ್ಲೆಯಲ್ಲಿ ಕಾಫಿನಾಡಿಗೆ ಅಗ್ರಸ್ಥಾನ ಅನ್ನೋದು ಗುಟ್ಟಾಗಿಲ್ಲ. ಕೊರೊನಾ ಮೊದಲ ಅಲೆಯಲ್ಲಿ ಜಿಲ್ಲೆ ಮೊದಲ ಎರಡು ತಿಂಗಳು ಸಂಪೂರ್ಣ ಗ್ರೀನ್ ಜೋನ್​ನಲ್ಲಿತ್ತು. ಆಗ ಜಿಲ್ಲೆಯಲ್ಲಿ ಒಂದೇ ದಿನ 276 ಕೇಸ್ ಬಂದದ್ದೇ ಹೆಚ್ಚು. ಆದರೆ ಇಂದು, ಇಡೀ ರಾಜ್ಯಕ್ಕೆ ನಂಬರ್ 1 ಸ್ಥಾನದಲ್ಲಿದ್ದು, ಒಂದೇ ದಿನ 1200ರ ಗಡಿ ದಾಟಿದೆ.

ವಲಸೆ ಕಾರ್ಮಿಕರ ಆಗಮನ ಸೋಂಕು ಹೆಚ್ಚಳಕ್ಕೆ ಕಾರಣ. ಮೇ ತಿಂಗಳಲ್ಲಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆ ಹಾಗೂ ರಾಜ್ಯದಿಂದ ಚಿಕ್ಕಮಗಳೂರಿಗೆ ಬಂದವರ ಸಂಖ್ಯೆ ಸುಮಾರು 18,000. ಅಲ್ಲದೆ, ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬರಲು ಇನ್ನೂ ಎರಡು ವಾರ ಬೇಕು ಅನ್ನೋದನ್ನು ಜಿಲ್ಲಾಧಿಕಾರಿಗಳೇ ಹೇಳಿದ್ದಾರೆ.

ಇನ್ನು ಸಿಎಂ ಜೊತೆಗಿನ ವಿಡಿಯೋ ಕಾನ್ಫರೆನ್ಸ್ ಬಳಿಕ ಮಾತನಾಡಿದ ಸಚಿವ ಅಂಗಾರ, ಜಿಲ್ಲೆಯಲ್ಲಿ ಸೋಂಕು ಕಡಿಮೆ ಆಗ್ತಿದೆ. ಮೇ 22ರಂದು ಇದ್ದ 7250 ಪ್ರಕರಣಗಳು, ಮೇ 30ರ ವೇಳೆಗೆ 6,237ಕ್ಕೆ ಬಂದಿತ್ತು. ಜೂನ್ 9ರ ವೇಳೆಗೆ 4,422 ಕೇಸ್‍ಗಳಾಗಿವೆ. ದಿನದಿಂದ ದಿನಕ್ಕೆ ಕೋವಿಡ್ ಪ್ರಮಾಣ ಇಳಿಮುಖವಾಗುತ್ತಿದೆ. ಜಿಲ್ಲೆಯಲ್ಲಿ ಸುಮಾರು ಶೇ 54ರಷ್ಟು ಕೋವಿಡ್ ಮುಕ್ತ ಗ್ರಾಮಗಳಿವೆ. ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.

ABOUT THE AUTHOR

...view details