ಕರ್ನಾಟಕ

karnataka

ETV Bharat / state

ಕಾಫಿನಾಡಲ್ಲಿ ಏರಿಕೆಯಾದ ಕೊರೊನಾ: ಇಂದು ಒಂದೇ ದಿನ 199 ಪ್ರಕರಣ ದಾಖಲು - ಕೊರೊನಾ ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಇಂದು ಒಂದೇ ದಿನ ಜಿಲ್ಲೆಯಾದ್ಯಂತ 199 ನೂತನ ಕೊರೊನಾ ಪ್ರಕರಣಗಳು ದಾಖಲಾಗುವುದರ ಮೂಲಕ ಸೋಂಕಿತರ ಸಂಖ್ಯೆ 6,265ಕ್ಕೆ ಏರಿಕೆಯಾಗಿದೆ.

Representative Image
ಸಾಂದರ್ಭಿಕ ಚಿತ್ರ

By

Published : Sep 14, 2020, 8:04 PM IST

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಇಂದು 199 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 6,265 ಕ್ಕೆ ಏರಿಕೆಯಾಗಿದೆ.

ಚಿಕ್ಕಮಗಳೂರು ತಾಲೂಕಿನಲ್ಲಿ 74, ಕಡೂರು 40, ತರೀಕೆರೆ 56, ಮೂಡಿಗೆರೆ 07, ಶೃಂಗೇರಿ 06, ಕೊಪ್ಪ 10, ಎನ್.ಆರ್.ಪುರ ತಾಲೂಕಿನಲ್ಲಿ 06 ಪ್ರಕರಣಗಳು ಪತ್ತೆಯಾಗಿವೆ. ಇನ್ನು ಕೊರೊನಾ ಸೋಂಕಿಗೆ ಇಂದು ಮೂವರು ಬಲಿಯಾಗಿದ್ದು, ಸಾವಿನ ಸಂಖ್ಯೆ 103ಕ್ಕೆ ಏರಿಕೆಯಾಗಿದೆ.

ಚಿಕ್ಕಮಗಳೂರು ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ 226 ಮಂದಿ ಇಂದು ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ ಜಿಲ್ಲೆಯಲ್ಲಿ ಒಟ್ಟು 4,787 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾದಂತಾಗಿದೆ.

ಈ ದಿನ ಪತ್ತೆಯಾದ ಸೋಂಕಿತರು ವಾಸಿಸುತ್ತಿದ್ದ ಏರಿಯಾವನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಸಂಪೂರ್ಣ ಸೀಲ್​​​ಡೌನ್ ಮಾಡಿ ಕಟ್ಟೆಚ್ಚರ ವಹಿಸಿದೆ. ಜಿಲ್ಲೆಯಲ್ಲಿ ಒಟ್ಟು 1,375 ಸಕ್ರಿಯ ಪ್ರಕರಣಗಳಿವೆ.

ABOUT THE AUTHOR

...view details