ಚಿಕ್ಕಮಗಳೂರು: ಜಿಲ್ಲೆಯ ಜನರ ನಿದ್ದೆಗೆಡಿಸಿದ್ದ ಇಬ್ಬರು ಮುಂಬೈ ರಿಟರ್ನ್ ವ್ಯಕ್ತಿಗಳ ವರದಿ ಲಭ್ಯವಾಗಿದ್ದು, ಇಬ್ಬರಲ್ಲೂ ಕೊರೊನಾ ಸೋಂಕು ಇಲ್ಲ ಎಂದು ದೃಢವಾಗಿದೆ.
ಮುಂಬೈಯಿಂದ ಬಂದಿದ್ದ ಇಬ್ಬರ ವರದಿ ನೆಗೆಟಿವ್: ನಿಟ್ಟುಸಿರು ಬಿಟ್ಟ ಚಿಕ್ಕಮಗಳೂರು ಜನತೆ - ಮಹಾರಾಷ್ಟ್ರ ಪ್ರಯಾಣಿಕರು
ಮಹಾರಾಷ್ಟ್ರದಿಂದ ಬಂದಿದ್ದ ಇಬ್ಬರ ಗಂಟಲು ದ್ರವ ಮಾದರಿಯನ್ನು ಕೊರೊನಾ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದರಿಂದ ಚಿಕ್ಕಮಗಳೂರಲ್ಲಿ ಕೊರೊನಾ ಭೀತಿ ಮನೆ ಮಾಡಿತ್ತು. ಆದರೆ ಇವರಿಬ್ಬರ ವರದಿ ನೆಗೆಟಿವ್ ಬಂದಿದ್ದು, ಜಿಲ್ಲೆಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಿಂದ ಮಹಾರಾಷ್ಟ್ರಕ್ಕೆ ಲಾರಿ ಡ್ರೈವರ್ ಹಾಗೂ ಕ್ಲೀನರ್ ಹೋಗಿದ್ದು, ಲಾರಿಯಲ್ಲಿ ಕೊರೊನಾ ಸೋಂಕಿತನೊಬ್ಬನನ್ನು ಶಿವಮೊಗ್ಗ ಜಿಲ್ಲೆಗೆ ಕರೆದುಕೊಂಡು ಬರಲಾಗಿತ್ತು. ಈ ಹಿನ್ನೆಲೆ ತರೀಕೆರೆಯಲ್ಲಿ ಡ್ರೈವರ್ ಹಾಗೂ ಕ್ಲೀನರ್ ತಪಾಸಣೆ ಮಾಡಲಾಗಿದ್ದು, ತರೀಕೆರೆಯ ಖಾಜಿ ಬೀದಿ ಸೀಲ್ಡೌನ್ ಮಾಡಲಾಗಿತ್ತು.
ಶುಕ್ರವಾರ ಇಬ್ಬರ ಗಂಟಲ ದ್ರವವನ್ನು ಪರೀಕ್ಷೆಗೆ ರವಾನೆ ಮಾಡಲಾಗಿತ್ತು. ಅದರ ಫಲಿತಾಂಶ ನೆಗೆಟಿವ್ ಬಂದಿದ್ದು ಚಿಕ್ಕಮಗಳೂರು ಜಿಲ್ಲೆಯ ಜನರು ನಿಟ್ಟುಸಿರು ಬಿಡುವಂತಾಗಿದೆ. ಸದ್ಯ ಜಿಲ್ಲೆ ಗ್ರೀನ್ ಝೋನ್ನಲ್ಲಿಯೇ ಉಳಿದುಕೊಂಡಿದೆ.