ಚಿಕ್ಕಮಗಳೂರು:ಜಿಲ್ಲೆಯಲ್ಲಿಂದು 126 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 2,940ಕ್ಕೆ ಏರಿಕೆಯಾಗಿದೆ.
ಚಿಕ್ಕಮಗಳೂರಿನಲ್ಲಿಂದು 126 ಮಂದಿಗೆ ಕೊರೊನಾ: 44 ಮಂದಿ ಗುಣಮುಖ - Chikkamagaluru News
ಚಿಕ್ಕಮಗಳೂರು ಜಿಲ್ಲೆಯಲ್ಲಿಂದು 126 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 44 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಚಿಕ್ಕಮಗಳೂರಿನಲ್ಲಿಂದು 126 ಮಂದಿಗೆ ಕೊರೊನಾ..44 ಜನರು ಗುಣಮುಖ
ಇಂದು ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ 44 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 1,838 ಸೋಂಕಿತರು ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 56 ಮಂದಿ ಕೊರೊನಾಗೆ ಬಲಿಯಾಗಿದ್ದು, 1,046 ಸಕ್ರಿಯ ಪ್ರಕರಣಗಳಿವೆ.
ತಾಲೂಕುವಾರು ಸೋಂಕಿತರು: ಚಿಕ್ಕಮಗಳೂರು 59, ಕಡೂರು 26, ತರೀಕೆರೆ 22, ಮೂಡಿಗೆರೆ 03, ಕೊಪ್ಪ 12, ಅಜ್ಜಂಪುರದ 4 ಮಂದಿಗೆ ಸೋಂಕು ತಗುಲಿದೆ.