ಚಿಕ್ಕಮಗಳೂರು:ಜಿಲ್ಲೆಯಲ್ಲಿಂದು 104 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 2,033ಕ್ಕೆ ಏರಿಕೆಯಾಗಿದೆ.
ಚಿಕ್ಕಮಗಳೂರು; 104 ಮಂದಿಗೆ ಕೊರೊನಾ.. ಸೋಂಕಿತರ ಸಂಖ್ಯೆ 2,033ಕ್ಕೆ ಏರಿಕೆ - Chikkamagaluru Corona Case
ಚಿಕ್ಕಮಗಳೂರು ಜಿಲ್ಲೆಯಲ್ಲಿಂದು 104 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 10 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
![ಚಿಕ್ಕಮಗಳೂರು; 104 ಮಂದಿಗೆ ಕೊರೊನಾ.. ಸೋಂಕಿತರ ಸಂಖ್ಯೆ 2,033ಕ್ಕೆ ಏರಿಕೆ Corona positive for 104 in Chikkamagaluru district](https://etvbharatimages.akamaized.net/etvbharat/prod-images/768-512-8420232-310-8420232-1597408529199.jpg)
ಚಿಕ್ಕಮಗಳೂರಿನಲ್ಲಿಂದು 104 ಮಂದಿಗೆ ಕೊರೊನಾ..ಸೋಂಕಿತರ ಸಂಖ್ಯೆ 2,033ಕ್ಕೆ ಏರಿಕೆ
ಜಿಲ್ಲಾ ಕೋವಿಡ್-19 ಆಸ್ಪತ್ರೆಯಿಂದ ಇಂದು 10 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೂ ಒಟ್ಟು 1,314 ಜನರು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಕೊರೊನಾಗೆ ಒಟ್ಟು 38 ಮಂದಿ ಬಲಿಯಾಗಿದ್ದಾರೆ. ಸದ್ಯ, ಜಿಲ್ಲೆಯಲ್ಲಿ 681 ಸಕ್ರಿಯ ಪ್ರಕರಣಗಳಿವೆ.
ತಾಲೂಕುವಾರು ಸೋಂಕಿತರ ವಿವರ: ಚಿಕ್ಕಮಗಳೂರು 37, ಕಡೂರು 28, ತರೀಕೆರೆ 26, ಮೂಡಿಗೆರೆ 06, ಕೊಪ್ಪ 01, ಎನ್ಆರ್ ಪುರ ತಾಲೂಕಿನ 06 ಜನರಿಗೆ ಸೋಂಕು ತಗುಲಿದೆ.