ಚಿಕ್ಕಮಗಳೂರು: ಕೊರೊನಾ ಸೋಂಕಿನ ಭೀತಿಯಿಂದ ಗ್ರಾಮಕ್ಕೆ ಬೇರೆಯವರ ಪ್ರವೇಶ ತಡೆಯಲು ಮುಖ್ಯ ರಸ್ತೆಗೆ ಬೇಲಿ, ವಿದ್ಯುತ್ ಕಂಬಗಳನ್ನು ಹಾಕಲಾಗಿದೆ.
ಕೊರೊನಾ ಭೀತಿ: ಗ್ರಾಮಸ್ಥರಿಂದ ರಸ್ತೆಗೆ ಬೇಲಿ - corona virus in india
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಗುಬ್ಬಿಹಳ್ಳಿ ಗ್ರಾಮಸ್ಥರು ಕೊರೊನಾ ಭೀತಿಯಿಂದ ಗ್ರಾಮಕ್ಕೆ ಪ್ರವೇಶ ಕಲ್ಪಸಿವ ರಸ್ತೆಗಳಿಗೆ ಅಡ್ಡಲಾಗಿ ಬೇಲಿ ಹಾಕಿ, ಹೊರಗಿನವರು ಗ್ರಾಮಕ್ಕೆ ಬಾರದಂತೆ ದಿಗ್ಬಂಧನ ವಿಧಿಸಿದ್ದಾರೆ.
ಗ್ರಾಮಸ್ಥರಿಂದ ರಸ್ತೆಗೆ ದಿಗ್ಬಂಧನ
ಕಡೂರು ತಾಲೂಕಿನ ಗುಬ್ಬಿಹಳ್ಳಿ ಗ್ರಾಮಸ್ಥರು ಹೊರಗಡೆಯಿಂದ ಊರಿಗೆ ಬರುವವರನ್ನು ತಡೆಯಲು ಈ ರೀತಿ ಮಾಡಿದ್ದಾರೆ. ಇನ್ನೂ ಕೆಲವು ಕಡೆ ರಸ್ತೆಯ ಮಧ್ಯೆ ದೊಡ್ಡ ಗುಂಡಿಗಳನ್ನು ತೆಗೆಯಲಾಗಿದೆ. ಇದರಿಂದ ಗ್ರಾಮಸ್ಥರು ಕೂಡಾ ಹೊರಗೆ ಹೋಗುವುದನ್ನು ತಡೆಯಲಾಗಿದೆ.
ಸುತ್ತಲಿನ ಗ್ರಾಮಸ್ಥರು ಸೋಂಕಿನ ಹರಡುವಿಕೆ ತಡೆಯಲು ಈ ರೀತಿ ನಿಷೇಧ ಹೇರುತ್ತಿದ್ದು, ಆದಷ್ಟು ಬೇಗ ಕೊರೊನಾ ಸೋಂಕಿನಿಂದ ದೇಶವನ್ನು ಉಳಿಸಿಕೊಳ್ಳಬೇಕಿದೆ.