ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 81 ಕ್ಕೆ ಏರಿಕೆ - ಚಿಕ್ಕಮಗಳೂರು ಜಿಲ್ಲೆ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು ಒಬ್ಬರಲ್ಲಿ ಕೊರೊನಾ ತಗುಲಿದ್ದು, ಸೋಂಕಿತರ ಸಂಖ್ಯೆ 81 ಕ್ಕೆ ಏರಿಕೆಯಾಗಿದೆ.

dsd
ಚಿಕ್ಕಮಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 81 ಕ್ಕೆ ಏರಿಕೆ

By

Published : Jul 1, 2020, 10:03 PM IST

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಇಂದು ಒಬ್ಬರಲ್ಲಿ ಕೊರೊನಾ ತಗುಲಿದ್ದು, ಸೋಂಕಿತರ ಸಂಖ್ಯೆ 81 ಕ್ಕೆ ಏರಿಕೆಯಾಗಿದೆ. ಇಂದು 5 ಮಂದಿ ಜಿಲ್ಲಾಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಚಿಕ್ಕಮಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 81 ಕ್ಕೆ ಏರಿಕೆ

ಈವರೆಗೂ 41 ಜನ ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದು, ತರೀಕೆರೆ ತಾಲೂಕಿನ ಅಜ್ಜಂಪುರ ಮೂಲದ ವೃದ್ಧೆ ಕೊರೊನಾಗೆ ಬಲಿಯಾಗಿದ್ದಾರೆ. 40 ವರ್ಷದ ಪುರುಷನಲ್ಲಿ ಇಂದು ಸೋಂಕು ಪತ್ತೆಯಾಗಿದ್ದು, ಬೆಂಗಳೂರು ಪ್ರಯಾಣದ ಹಿನ್ನೆಲೆ ಸೋಂಕು ಪತ್ತೆಯಾಗಿದೆ. ಈ ಸೋಂಕಿತ ವ್ಯಕ್ತಿ ವಾಸ ಮಾಡುತ್ತಿದ್ದ ಏರಿಯಾವನ್ನು ಪೊಲೀಸರು ಹಾಗೂ ಆರೋಗ್ಯ ಇಲಾಖೆ ಸೀಲ್ ಡೌನ್ ಮಾಡಿ, ಕಟ್ಟೆಚ್ಚರ ವಹಿಸಿದೆ.

ಸೋಂಕಿತ ವ್ಯಕ್ತಿಯ ಜೊತೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದ್ದ ಜನರನ್ನು ಹುಡುಕುವ ಕೆಲಸ ಆರಂಭಿಸಲಾಗಿದೆ. ಸೋಂಕಿತನನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ABOUT THE AUTHOR

...view details