ಕರ್ನಾಟಕ

karnataka

ETV Bharat / state

ಭಾವಶಿಲ್ಪ ರಚನಾ ಸ್ಪರ್ಧೆ: ಶಾಂತಿನಿಕೇತನ ಮಹಾವಿದ್ಯಾಲಯಕ್ಕೆ ಪ್ರಥಮ ಸ್ಥಾನ - undefined

ಏಷ್ಯಾದಲ್ಲಿ ಅತಿದೊಡ್ಡ ಅನಿಮೇಶನ್ ತಂತ್ರಜ್ಞಾನದ ಗ್ರಾಫಿಕ್ಸ್-2019 ಸಮ್ಮಿಲನ ಕಾರ್ಯಕ್ರಮದಲ್ಲಿ, ನಡೆದ ಭಾವಶಿಲ್ಪ ರಚನಾ ಸ್ಫರ್ಧೆಯಲ್ಲಿ ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಯಾದ ಮಳಲೂರು ಗ್ರಾಮದ ಗ್ರಾಮೀಣ ಪ್ರತಿಭೆಯಾದ ಅಮೃತ್ ಸಿಂಗ್ ರವರಿಗೆ ಪ್ರಥಮ ಬಹುಮಾನ ದೊರೆತಿದೆ.

ಕಲೆ

By

Published : Jul 5, 2019, 11:54 PM IST

ಚಿಕ್ಕಮಗಳೂರು:ನಗರದಲ್ಲಿರುವ ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯಕ್ಕೆ ಭಾವಶಿಲ್ಪ ರಚನಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ದೊರಕಿದೆ.

ಏಷ್ಯಾದಲ್ಲಿ ಅತಿದೊಡ್ಡ ಅನಿಮೇಶನ್ ತಂತ್ರಜ್ಞಾನದ ಗ್ರಾಫಿಕ್ಸ್-2019 ಸಮ್ಮಿಲನ ಕಾರ್ಯಕ್ರಮದಲ್ಲಿ ಚಿತ್ರಕಲೆ, ಭಾವಶಿಲ್ಪ ರಚನೆ, ಡಿಜಿಟಲ್ ಪೈಂಟಿಂಗ್, ಡಿಜಿಟಲ್ ಮಾಡಲಿಂಗ್, ಸ್ಟೋರಿ ಬೋರ್ಡ್​ ರೈಟಿಂಗ್, 3ಡಿ ಗೇಮಿಂಗ್, 3ಡಿ ಕ್ಯಾರೆಕ್ಟರ್ ಅನಿಮೇಶನ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಅದರಲ್ಲಿ ಭಾವಶಿಲ್ಪ ರಚನಾ ಸ್ಫರ್ಧೆಯಲ್ಲಿ ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಯಾದ ಮಳಲೂರು ಗ್ರಾಮದ ಗ್ರಾಮೀಣ ಪ್ರತಿಭೆಯಾದ ಅಮೃತ್ ಸಿಂಗ್ ರವರಿಗೆ ಪ್ರಥಮ ಬಹುಮಾನ ಬಂದಿದೆ. ಸ್ಪರ್ಧೆಯಲ್ಲಿ ಈ ಬಾರಿ ಭಾರತರತ್ನ ಸರ್ ಎಂ .ವಿಶ್ವೇಶ್ವರಯ್ಯರವರ ಎದೆ ಮಟ್ಟದ ಭಾವಶಿಲ್ಪ ರಚನೆಯ ವಿಷಯವಾಗಿತ್ತು.

ಬಹುಮಾನ ಪಡೆದುಕೊಳ್ಳುತ್ತಿರುವ ಅಮೃತ್ ಸಿಂಗ್

ಕರ್ನಾಟಕ ಸರ್ಕಾರ ಮಾಹಿತಿ ತಂತ್ರಜ್ಞಾನ ಇಲಾಖೆ ಹಾಗೂ ಅಭಯ್ ಸಂಸ್ಥೆಯ ನೆರವಿನೊಂದಿಗೆ ರಾಜ್ಯದಲ್ಲಿ 120 ಕಲಾ ಕಾಲೇಜಿನಲ್ಲಿ, 27 ಕಲಾ ಕಾಲೇಜುಗಳನ್ನು ಆಯ್ಕೆ ಮಾಡಿದ್ದು, ನಗರದ ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯವು ಆಯ್ಕೆಯಾಗಿದೆ. ಸತತವಾಗಿ ಮೂರು ವರ್ಷ ಶಿಲ್ಪ ರಚನೆಯಲ್ಲಿ ಈ ಯುವ ಕಲಾವಿದನಿಗೆ 25,000 ರೂ ನಗದು ಬಹುಮಾನ ಬಂದಿದ್ದು, ಇನ್ ಟೋಸ್ ಡಿಜಿಟಲ್ ರಚನೆಯ ವ್ಯಾಕ್ಯೋಮ್ ಪ್ಯಾಡ್ ಹಾಗೂ ಪ್ರಮಾಣಪತ್ರ ಒಳಗೊಂಡಿದೆ.

For All Latest Updates

TAGGED:

ABOUT THE AUTHOR

...view details