ಚಿಕ್ಕಮಗಳೂರು :ಕಾಂಗ್ರೆಸ್ಸಿಗರು ಇತಿಹಾಸ ಮರೆತಿದ್ದಾರೆ. ಈಗಿನ ಕಾಂಗ್ರೆಸ್ಗೂ ಹಿಂದಿನ ಕಾಂಗ್ರೆಸ್ಗೂ ಯಾವ ಸಂಬಂಧವಿಲ್ಲ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ.
ಗೋಹತ್ಯೆ ನಿಷೇಧ ಕಾಯ್ದೆ ವಿಚಾರ ಕುರಿತು ನಗರದಲ್ಲಿ ಸಿ ಟಿ ರವಿ ಮಾತನಾಡಿದ್ದು, ಈಗಿನ ಕಾಂಗ್ರೆಸ್ಗೂ ಹಿಂದಿನ ಕಾಂಗ್ರೆಸ್ಗೂ ಸಂಬಂಧವಿಲ್ಲ. ಜೋಡೆತ್ತು, ಹಸು-ಕರು ಕಾಂಗ್ರೆಸ್ ಪಕ್ಷದ ಗುರುತಾಗಿತ್ತು. ಸಿದ್ದರಾಮಯ್ಯ ಅವರ ಕುಲದೈವ ಬೀರೇಶ್ವರ ಸ್ವಾಮಿ ಗೋಹತ್ಯೆಯನ್ನು ಸಮರ್ಥಿಸುತ್ತಾರಾ.. ಬೀರೇಶ್ವರನ ವಾಹನ ಏನೆಂದು ಸಿದ್ದರಾಮಯ್ಯ ಅವರು ಯೋಚಿಸಲಿ. ಮೂಲ ಸಂಸ್ಕೃತಿ ಯಾವುದು, ವೋಟಿಗಾಗಿ ಇರೋ ವಿಚಾರ ಯಾವುದೆಂದು ತಿಳಿಯುತ್ತೆ ಎಂದರು.