ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ - local body election results

ಚಿಕ್ಕಮಗಳೂರು ನಗರಸಭೆಯ ಒಟ್ಟು 35 ಸ್ಥಾನಗಳಲ್ಲಿ ಬಿಜೆಪಿ-18, ಕಾಂಗ್ರೆಸ್-12, ಜೆಡಿಎಸ್- 2, ಎಸ್.ಡಿ.ಪಿ.ಐ -1 ಹಾಗೂ 2 ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

congress won in chickmagaluru local body election
ಚಿಕ್ಕಮಗಳೂರು ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ

By

Published : Dec 30, 2021, 2:17 PM IST

ಚಿಕ್ಕಮಗಳೂರು: ತೀವ್ರ ಕುತೂಹಲ ಮೂಡಿಸಿದ್ದ ಚಿಕ್ಕಮಗಳೂರು ನಗರಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಮುಗಿದಿದ್ದು, ಈ ಬಾರಿಯೂ ಚಿಕ್ಕಮಗಳೂರು ನಗರಸಭೆಯನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದು ಕೊಂಡಿದೆ.

ನಗರಸಭೆಯ ಒಟ್ಟು 35 ಸ್ಥಾನಗಳಲ್ಲಿ ಬಿಜೆಪಿ-18, ಕಾಂಗ್ರೆಸ್-12, ಜೆಡಿಎಸ್- 2, ಎಸ್.ಡಿ.ಪಿ.ಐ -1 ಹಾಗೂ 2 ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಈ ಹಿಂದಿನಿಂದಲೂ ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿರುವ ಚಿಕ್ಕಮಗಳೂರು ಜಿಲ್ಲೆಯು ನಗರಸಭಾ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನಗಳನ್ನು ಗೆಲ್ಲುವ ಮೂಲಕ ಮೂರನೇ ಬಾರಿಗೆ ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಚಿಕ್ಕಮಗಳೂರು ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ

ನಗರಸಭೆಯಲ್ಲಿ ಖಾತೆ ತೆರೆದ ಎಸ್.ಡಿ.ಪಿ.ಐ:

ಚಿಕ್ಕಮಗಳೂರು ನಗರಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಒಂದು ಸ್ಥಾನವನ್ನು ಗೆಲ್ಲುವ ಮೂಲಕ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ತನ್ನ ಖಾತೆಯನ್ನು ತೆರೆದಿದೆ. ತಮ್ಮ ತಮ್ಮ ಅಭ್ಯರ್ಥಿಗಳು ಗೆದ್ದ ಖುಷಿಯಲ್ಲಿ ಪಕ್ಷಗಳ ಕಾರ್ಯಕರ್ತರು ಹಾಗೂ ಬೆಂಬಲಿಗರು ವಿಜಯೋತ್ಸವವನ್ನು ಆಚರಿಸುತ್ತಿದ್ದಾರೆ. ಪಟಾಕಿ ಸಿಡಿಸಿ ಸಿಹಿ ಹಂಚಿ ನೃತ್ಯ ಮಾಡುವ ಮೂಲಕ ಅಸಂಖ್ಯಾತ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

ನಗರಸಭೆ ಚುನಾವಣೆ ಫಲಿತಾಂಶದ ಸಂಪೂರ್ಣ ವಿವರ:

  • ವಾರ್ಡ್ ನಂಬರ್ 1ರಲ್ಲಿ ಬಿಜೆಪಿಯ ಕವಿತಾ ಶೇಖರ್ ಗೆಲುವು
  • ವಾರ್ಡ್ ನಂಬರ್ 2ರಲ್ಲಿ ಕಾಂಗ್ರೆಸ್​ನ ಇಂದಿರಾ ಶಂಕರ್ ಗೆಲುವು
  • ವಾರ್ಡ್ ನಂಬರ್ 3ರಲ್ಲಿ ಬಿಜೆಪಿಯ ಅರುಣ್ ಕುಮಾರ್ ಗೆಲುವು
  • ವಾರ್ಡ್ ನಂಬರ್ 4ರಲ್ಲಿ ಬಿಜೆಪಿಯ ವಿದ್ಯಾ ಎನ್ ಕುಮಾರ್ ಗೆಲುವು
  • ವಾರ್ಡ್ ನಂಬರ್ 5ರಲ್ಲಿ ಬಿಜೆಪಿಯ ಮಧುಕುಮಾರ್ ರಾಜ್ ಅರಸ್ ಗೆಲುವು
  • ವಾರ್ಡ್ ನಂಬರ್ 6ರಲ್ಲಿ ಬಿಜೆಪಿಯ ಬಿ.ಸಿ ಸುಜಾತ ಗೆಲುವು
  • ವಾರ್ಡ್ ನಂಬರ್ 7ರಲ್ಲಿ ಬಿಜೆಪಿಯ ಸಿ.ಎಂ ಕುಮಾರ್ ಗೆಲುವು
  • ವಾರ್ಡ್ ನಂಬರ್ 8ರಲ್ಲಿ ಜೆಡಿಎಸ್​ನ ಎ.ಸಿ ಕುಮಾರ್ ಗೆಲುವು
  • ವಾರ್ಡ್ ನಂಬರ್ 9ರಲ್ಲಿ ಕಾಂಗ್ರೆಸ್​ನ ಪರಮೇಶ್ವರ್ ರಾಜ್ ಅರಸ್ ಗೆಲುವು
  • ವಾರ್ಡ್ ನಂಬರ್ 10ರಲ್ಲಿ ಬಿಜೆಪಿಯ ರೂಪ ಕುಮಾರ್ ಗೆಲುವು
  • ವಾರ್ಡ್ ನಂಬರ್ 11ರಲ್ಲಿ ಬಿಜೆಪಿಯ ಉಮಾದೇವಿ ಕೃಷ್ಣಪ್ಪ ಗೆಲುವು
  • ವಾರ್ಡ್ ನಂಬರ್ 12ರಲ್ಲಿ ಕಾಂಗ್ರೆಸ್​ನ ಸೈಯದ್ ಜಾವಿದ್ ಗೆಲುವು
  • ವಾರ್ಡ್ ನಂಬರ್ 13ರಲ್ಲಿ ಜೆಡಿಎಸ್​​ನ ಗೋಪಿ ಜೆಡಿಎಸ್ ಗೆಲುವು
  • ವಾರ್ಡ್ ನಂಬರ್ 14ರಲ್ಲಿ ಬಿಜೆಪಿಯ ಅನು ಗೆಲುವು
  • ವಾರ್ಡ್ ನಂಬರ್ 15ರಲ್ಲಿ ಪಕ್ಷೇತರರಾದ ಪಿ. ಶೀಲಾ ದಿನೇಶ್ ಗೆಲುವು
  • ವಾರ್ಡ್ ನಂಬರ್ 16ರಲ್ಲಿ ಕಾಂಗ್ರೆಸ್​ನ ಖಲಂದರ್ ಗೆಲುವು
  • ವಾರ್ಡ್ ನಂಬರ್ 17ರಲ್ಲಿ ಪಕ್ಷೇತರರರಾದ ಮುನೀರ್ ಅಹಮದ್ ಗೆಲುವು
  • ವಾರ್ಡ್ ನಂಬರ್ 18ರಲ್ಲಿ ಬಿಜೆಪಿಯ ಮಣಿಕಂಠ ಗೆಲುವು
  • ವಾರ್ಡ್ ನಂಬರ್ 19ರಲ್ಲಿ ಕಾಂಗ್ರೆಸ್​ನ ಶಾದಮ್ ಆಲಂ ಖಾನ್ ಗೆಲುವು
  • ವಾರ್ಡ್ ನಂಬರ್ 20ರಲ್ಲಿ ಕಾಂಗ್ರೆಸ್​ನ ತಬ್ಸಂ ಬಾನು ಗೆಲುವು
  • ವಾರ್ಡ್ ನಂಬರ್ 21ರಲ್ಲಿ ಬಿಜೆಪಿಯ ವಿಪುಲ್ ಕುಮಾರ್ ಜೈನ್ ಗೆಲುವು
  • ವಾರ್ಡ್ ನಂಬರ್ 22ರಲ್ಲಿ ಕಾಂಗ್ರೆಸ್​ನ ಸಿ.ಎಂ ಸಲ್ಮಾ ಗೆಲುವು
  • ವಾರ್ಡ್ ನಂಬರ್ 23ರಲ್ಲಿ ಎಸ್​ಡಿಪಿಐನ ಮಂಜುಳಾ ಶ್ರೀನಿವಾಸ್ ಗೆಲುವು
  • ವಾರ್ಡ್ ನಂಬರ್ 24ರಲ್ಲಿ ಕಾಂಗ್ರೆಸ್​ನ ಗುರುಮಲ್ಲಪ್ಪ ಗೆಲುವು
  • ವಾರ್ಡ್ ನಂಬರ್ 25ರಲ್ಲಿ ಕಾಂಗ್ರೆಸ್​ನ ಸಿ.ಪಿ ಲಕ್ಷ್ಮಣ್ ಗೆಲುವು
  • ವಾರ್ಡ್ ನಂಬರ್ 26ರಲ್ಲಿ ಬಿಜೆಪಿಯ ವರಸಿದ್ಧಿ ವೇಣುಗೋಪಾಲ್ ಗೆಲುವು
  • ವಾರ್ಡ್ ನಂಬರ್ 27ರಲ್ಲಿ ಬಿಜೆಪಿಯ ಟಿ. ರಾಜಶೇಖರ್ ಗೆಲುವು
  • ವಾರ್ಡ್ ನಂಬರ್ 28ರಲ್ಲಿ ಬಿಜೆಪಿಯ ರಾಜು ಜೆ ಗೆಲುವು
  • ವಾರ್ಡ್ ನಂಬರ್ 29ರಲ್ಲಿ ಬಿಜೆಪಿಯ ಅಮೃತೇಶ್ ಚನ್ನಕೇಶವ ಗೆಲುವು
  • ವಾರ್ಡ್ ನಂಬರ್ 30ರಲ್ಲಿ ಕಾಂಗ್ರೆಸ್​​ನ ಗೌಸಿಯಾ ಖಾನಂ ಗೆಲುವು
  • ವಾರ್ಡ್ ನಂಬರ್ 31ರಲ್ಲಿ ಬಿಜೆಪಿಯ ದೀಪ ಕೆ.ಎನ್ ಗೆಲುವು
  • ವಾರ್ಡ್ ನಂಬರ್ 32ರಲ್ಲಿ ಬಿಜೆಪಿಯ ಭವ್ಯ ಮಂಜುನಾಥ್ ಗೆಲುವು
  • ವಾರ್ಡ್ ನಂಬರ್ 33ರಲ್ಲಿ ಕಾಂಗ್ರೆಸ್​​ನ ಲಕ್ಷ್ಮಣ್ ಗೆಲುವು
  • ವಾರ್ಡ್ ನಂಬರ್ 34ರಲ್ಲಿ ಕಾಂಗ್ರೆಸ್​ನ ಮಂಜುಳಾ ಕೆ.ಆರ್ ಗೆಲುವು
  • ವಾರ್ಡ್ ನಂಬರ್ 35ರಲ್ಲಿ ಬಿಜೆಪಿಯ ಲಲಿತಾಬಾಯಿ ಗೆಲುವು

ಇದನ್ನೂ ಓದಿ:ಬಿಡದಿ ಪುರಸಭೆ ಜೆಡಿಎಸ್​​ ತೆಕ್ಕೆಗೆ: ಹೆಚ್​ಡಿಕೆ ಸಂತಸ

ABOUT THE AUTHOR

...view details