ಚಿಕ್ಕಮಗಳೂರು:ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಅವರ ಮಗಳ ಮದುವೆಗೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೂತನ ವಧು-ವರರಿಗೆ ಶುಭ ಕೋರಿದರು.
ಶಾಸಕ ರಾಜೇಗೌಡ ಪುತ್ರಿ ವಿವಾಹ ಕಾರ್ಯಕ್ರಮದಲ್ಲಿ ಡಿಕೆಶಿ ಭಾಗಿ - Congress MLA TD Rajegowda
ಚಿಕ್ಕಮಗಳೂರಿನ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ನಿಗದಿಯಾಗಿದ್ದ ಶಾಸಕರ ಮಗಳ ಮದುವೆ ಕೊರೊನಾ ಭೀತಿಯಿಂದ ಶಾಸಕರ ತೋಟದ ಮನೆಗೆ ಶಿಫ್ಟ್ ಆಗಿತ್ತು. ಇಂದು ಶಾಸಕ ರಾಜೇಗೌಡರ ಸ್ವಗ್ರಾಮ ಚಿಕ್ಕಮಗಳೂರಿನ ಬಾಸಾಪುರದ ತೋಟದ ಮನೆಯಲ್ಲಿ 500 ಜನರ ಮಧ್ಯೆ ಸರಳವಾಗಿ ಪುತ್ರಿಯ ವಿವಾಹ ನೆರವೇರಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಧು ಡಾ. ಸಂಜನಾ ಹಾಗೂ ವರ ವಚನ್ ಅವರಿಗೆ ಶುಭ ಕೋರಿದರು. ಈ ಸಂದರ್ಭದಲ್ಲಿ ಬಹುತೇಕರು ಮಾಸ್ಕ್ ಧರಿಸಿಕೊಂಡು ಮದುವೆಗೆ ಆಗಮಿಸಿದ್ದು ವಿಶೇಷವಾಗಿತ್ತು. ಮದುವೆ ಊಟ ಬಡಿಸುವವರು ಕೂಡ ಮಾಸ್ಕ್ ಹಾಕಿಕೊಂಡೇ ಎಲ್ಲರಿಗೂ ಊಟ ಬಡಿಸಿದರು. ಕೊರೊನಾ ಭೀತಿಯಿಂದ ಶಾಸಕರ ಮಗಳ ಮದುವೆ ತೋಟದ ಮನೆಯಲ್ಲಿ ಸರಳವಾಗಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನೆರವೇರಿತು.
TAGGED:
Congress MLA TD Rajegowda