ಚಿಕ್ಕಮಗಳೂರು:ಮಳೆಗಾಗಿ ಪ್ರರ್ಥಿಸಿ ಶೃಂಗೇರಿಯ ಕಿಗ್ಗಾದಲ್ಲಿರುವ ಋಷ್ಯಶೃಂಗ ಮಳೆ ದೇವರಿಗೆ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಪಿ.ಟಿ.ಪರಮೇಶ್ವರ್ ನಾಯ್ಕ ಪರ್ಜನ್ಯ ಜಪ ನೆರವೇರಿಸಿದರು.
ಮಳೆಗಾಗಿ ಋಶ್ಯಶೃಂಗನಿಗೆ ಪರ್ಜನ್ಯ ಜಪ ನೆರವೇರಿಸಿದ ಕೈ ನಾಯಕರು ರಾಜ್ಯದಲ್ಲಿ ಉತ್ತಮ ಮಳೆಗಾಗಿ ಮಳೆ ದೇವರು ಋಷ್ಯಶೃಂಗನಿಗೆ ವಿಶೇಷ ಪೂಜೆ ನಡೆಸಲಾಯಿತು. ಪರ್ಜನ್ಯ ಜಪ ಬೆಳಿಗ್ಗೆ 5.30ಕ್ಕೆ ಪ್ರಾರಂಭವಾಗಿ 6.30ರವರೆಗೆ ನಡೆಯಿತು. ಜೊತೆಗೆ 6 ಗಂಟೆ 5 ನಿಮಿಷಕ್ಕೆ ಬ್ರಾಹ್ಮಿ ಮಹೂರ್ತದ ಸಂಕಲ್ಪ ಕಾರ್ಯ ಕೂಡ ನೆರವೇರಿತು.
ಮಳೆ ದೇವರೆಂದೇ ಖ್ಯಾತಿಯಾಗಿರೋ ಋಷ್ಯಶೃಂಗನಿಗೆ 21 ಅರ್ಚಕರಿಂದ ಪರ್ಜನ್ಯ ಜಪ ನೆರವೇರಿತು. ಪ್ರತಿ ಅರ್ಚಕರು 1008ರಂತೆ ಸುಮಾರು 10 ಸಾವಿರಕ್ಕು ಹೆಚ್ಚು ಅಧಿಕ ಪರ್ಜನ್ಯ ಜಪಗಳನ್ನು ಸಮೃದ್ಧ ಮಳೆಗಾಗಿ ನಡೆಸಿದರು. ಅನಂತರ ಋಷ್ಯಶೃಂಗನಿಗೆ ರುದ್ರಾಭಿಷೇಕ ಜಪ ಪ್ರಾರಂಭವಾಗಿದ್ದು, ಕೈ ಸಚಿವ ಪರಮೇಶ್ವರ್ ನಾಯ್ಕ ಚಾಲನೆ ನೀಡಿದರು.
ಈ ವಿಶೇಷ ಪೂಜೆಗಾಗಿ ಕಳೆದ ರಾತ್ರಿಯೇ ಶೃಂಗೇರಿಯಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಪಿ.ಟಿ.ಪರಮೇಶ್ವರ್ ನಾಯ್ಕ ವಾಸ್ತವ್ಯ ಹೂಡಿದ್ದರು. ಕಿಗ್ಗಾದ ಋಷ್ಯಶೃಂಗ, ಡಿ.ಕೆ.ಶಿವಕುಮಾರ್ ಅವರ ನಂಬಿಕೆಯ ಹಾಗೂ ಇಷ್ಟ ದೈವ ಆಗಿದೆ. ಈ ಹಿಂದೆ ಕೂಡ ಮಳೆಗಾಗಿ ಡಿ.ಕೆ.ಶಿವಕುಮಾರ್ ಇಲ್ಲಿ ಮಳೆಗಾಗಿ ಬೇಡಿಕೊಂಡಿದ್ದರು. ಅನಂತರ ರಾಜ್ಯದಲ್ಲಿ ಉತ್ತಮ ಮಳೆಯಾಗಿತ್ತು. ಮಳೆಯಾದ ಮೇಲೆ ಡಿ.ಕೆ.ಶಿವಕುಮಾರ್ ಅವರು ದೇವಸ್ಥಾನಕ್ಕೆ ಬಂದು ಹರಕೆ ತೀರಿಸಿದ್ದರು.