ಚಿಕ್ಕಮಗಳೂರು: ಅಲ್‍ಖೈದಾ ಬಿಡುಗಡೆ ವಿಡಿಯೋ ಕುರಿತು ಸಿದ್ದರಾಮಯ್ಯ ಹೇಳಿಕೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನಲ್ಲಿ ಮಾಜಿ ಸಿದ್ದರಾಮಯ್ಯಗೆ ಶಾಸಕ ಸಿ.ಟಿ.ರವಿ ಟಾಂಗ್ ಕೊಟ್ಟಿದ್ದು, ಅಲ್‍ಖೈದಾ-ಕಾಂಗ್ರೆಸ್ ಒಂದೇ ಕಡೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ಹೋಲಿಕೆ ಮಾಡುವುದಾದರೆ ಕಾಂಗ್ರೆಸ್-ಅಲ್‍ಖೈದಾ ಮಧ್ಯೆ ಹೋಲಿಕೆ ಮಾಡಬೇಕು. ಸೂತ್ರದಾರಿ ಅಲ್‍ಖೈದಾನೋ, ಪಾತ್ರದಾರಿ ಕಾಂಗ್ರೆಸ್ಸೋ ಎನ್ನುವುದು ಮೊದಲು ಗೊತ್ತಾಗಬೇಕು ಎಂದು ವಾಗ್ದಾಳಿ ಮಾಡಿದ್ದಾರೆ.
ಕಾಂಗ್ರೆಸ್ ನಾಯಕರು ಸೋಲಿನ ಹತಾಶೆಯಿಂದ ಬುದ್ಧಿ ಭ್ರಮಣೆಯಾದಂತೆ ಮಾತನಾಡುತ್ತಿದ್ದಾರೆ. ಯುಪಿಯಲ್ಲಿ 399 ರಲ್ಲಿ ಸ್ಪರ್ಧೆ ಮಾಡಿ 387ರಲ್ಲಿ ಠೇವಣಿ ಕಳೆದುಕೊಂಡರೆ ಯಾರಿಗಾದರೂ ಹತಾಶೆ ಕಾಡುತ್ತದೆ. ಪಂಜಾಬ್‍ನಲ್ಲೂ ಇದ್ದ ಸರ್ಕಾರವನ್ನು ಕಳೆದುಕೊಂಡು ಹತಾಶರಾಗಿ ಬುದ್ಧಿಭ್ರಮಣೆಯಾದಂತೆ ಕಾಂಗ್ರೆಸ್ನವರು ಮಾತನಾಡುತ್ತಿದ್ದಾರೆ.