ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು: ಕ್ಷುಲ್ಲಕ ಕಾರಣಕ್ಕೆ ಕ್ಷಣಾರ್ಧದಲ್ಲೇ ಎರಡು ಜೀವಗಳ ಬಲಿ! - ಚಿಕ್ಕಮಗಳೂರು ಕೊಲೆ ಪ್ರಕರಣ

ಕ್ಷುಲ್ಲಕ ಕಾರಣಕ್ಕೆ ಅರ್ಧ ಗಂಟೆಯೊಳಗೆ ಎರಡು ಜೀವಗಳು ಬಲಿಯಾಗಿರುವ ಘಟನೆ ಮಲ್ಲಂದೂರು ಸಮೀಪದ ಗಂಧರ್ವಗಿರಿ ಗ್ರಾಮದಲ್ಲಿ ನಡೆದಿದೆ.

commited to suicide after murder at chickmagaluru
ಚಿಕ್ಕಮಗಳೂರು: ಕೊಲೆಗೈದು ಆತ್ಮಹತ್ಯೆಗೆ ಶರಣು!

By

Published : Sep 23, 2020, 6:52 AM IST

ಚಿಕ್ಕಮಗಳೂರು:ವ್ಯಕ್ತಿಯೊಬ್ಬನನ್ನುಕೊಲೆಗೈದ ಬಳಿಕ ಭಯಗೊಂಡು ತಾನೂ ಕಳೆನಾಶಕ ಸೇವಿಸಿ ಮತ್ತೊಬ್ಬ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರೋ ಘಟನೆ ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಸಮೀಪದ ಗಂಧರ್ವಗಿರಿ ಗ್ರಾಮದಲ್ಲಿ ನಡೆದಿದೆ.

ಗಂಧರ್ವಗಿರಿ ಗ್ರಾಮದ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಕೃಷ್ಣಪ್ಪ ಹಾಗೂ ಬಸಪ್ಪ ಎಂಬುವವರು ಕೆಲಸ ಮಾಡಿಕೊಂಡು ತೋಟದ ಲೈನ್ ಮನೆಗಳಲ್ಲಿ ವಾಸವಿದ್ದರು. ಇಬ್ಬರೂ ಕೂಡ ಮೂಲತಃ ಮಂಗಳೂರಿನವರಾಗಿದ್ದು, ಮಲೆನಾಡಿನಲ್ಲೇ ಬದುಕು ಕಟ್ಟಿಕೊಂಡಿದ್ದರು. ಆದರೆ, ಇಬ್ಬರ ನಡುವೆ ಆಗಾಗ್ಗೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆಯುತ್ತಿತ್ತು.

ನಿನ್ನೆ ಬೆಳಗ್ಗೆ ನೀರು ತರಲು ಹೋದ ಕೃಷ್ಣಪ್ಪ ಹಾಗೂ ಕೆಲಸಕ್ಕೆ ಹೊರಟಿದ್ದ ಬಸಪ್ಪನ ಮಧ್ಯೆ ಗಲಾಟೆ ನಡೆದಿದೆ. ಆದರೆ, ಇಬ್ಬರ ನಡುವೆ ನೀರಿನ ಬಾವಿ ಬಳಿ ಏನು ನಡೆಯಿತೆಂದು ಯಾರಿಗೂ ಗೊತ್ತಿಲ್ಲ. ಕೆಲಸಕ್ಕೆ ಹೊರಟಿದ್ದ ಬಸಪ್ಪ ಕೈಯಲ್ಲಿದ್ದ ಮಚ್ಚಿನಿಂದ ಕೃಷ್ಣಪ್ಪನ ಕುತ್ತಿಗೆಗೆ ಹೊಡೆದಿದ್ದಾನೆ. ತೀವ್ರವಾದ ರಕ್ತ ಸ್ರಾವದಿಂದ 45 ವರ್ಷದ ಕೃಷ್ಣಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಕೊಲೆಗೈದೆ ಎಂದು ಭಯಗೊಂಡ ಬಸಪ್ಪ ಕೆಲಸಕ್ಕೂ ಹೋಗದೆ ಮನೆಗೆ ಬಂದು ಕಳೆನಾಶಕ ಕುಡಿದು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಲ್ಲಂದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details