ಕರ್ನಾಟಕ

karnataka

ETV Bharat / state

Coffee Price: ಟೊಮೆಟೊ ಆಯ್ತು ಇದೀಗ ಕಾಫಿ ಬೆಳೆಗಾರರಲ್ಲಿ ಸಂತಸ; ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ ಬೆಲೆ ಏರಿಕೆ

ಕಳೆದ 10-15 ವರ್ಷದಿಂದ ಒಂದೇ ದರ ಕಾಯ್ದುಕೊಂಡಿದ್ದ ಕಾಫಿ ಇದೀಗ ಉತ್ತಮ ಬೆಲೆ ಕಾಣುತ್ತಿದ್ದು, ಇದು ಕಾಫಿ ಬೆಳೆಗಾರರಲ್ಲಿ ಸಂತಸ ಮೂಡಿಸಿದೆ.

Coffee price
Coffee price

By

Published : Aug 10, 2023, 12:25 PM IST

Updated : Aug 10, 2023, 12:57 PM IST

ಬೆಂಗಳೂರು: ಟೊಮೆಟೊ ಬೆಲೆ ಏರಿಕೆಯಿಂದ ಅನೇಕ ರೈತರ ಬಾಳು ಹಸನಾಗಿದೆ. ಇದೀಗ ಈ ಸರದಿ ಕಾಫಿ ಬೆಳೆಗಾರರದ್ದು. ಸದ್ಯ ಕಾಫಿ ಬೆಳೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನೇಕ ಕಾರಣಗಳಿಂದ ಉತ್ತಮ ಬೆಲೆ ಪಡೆಯುವ ಹಾದಿಯತ್ತ ಸಾಗುತ್ತಿದೆ. ಕಳೆದೊಂದು ದಶಕದಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದೇ ದರ ಕಾಯ್ದುಕೊಂಡಿದ್ದ ಕಾಫಿ ಇದೀಗ ಚೇತರಿಕೆ ಹಾದಿಯತ್ತ ಮುನ್ನುಗ್ಗುತ್ತಿದ್ದು, ಇದು ಕಾಫಿ ಬೆಳೆಗಾರರ ಸಂತಸಕ್ಕೆ ಕಾರಣವಾಗಿದೆ.

ಭಾರತದಲ್ಲಿ ದಕ್ಷಿಣ ರಾಜ್ಯದಲ್ಲಿ ಕಾಫಿ ಉತ್ತಮ ಬೆಳೆಯನ್ನು ಹೊಂದಿದೆ. ಶೀತ ವಾತಾವರಣ ಸೇರಿದಂತೆ ಹಲವು ಪರಿಸರ ಪೂರಕ ಅಂಶಗಳು ಈ ಬೆಳೆಗೆ ಅಗತ್ಯವಾಗಿದೆ. ಇನ್ನು ದೇಶದಲ್ಲೇ ಒಟ್ಟಾರೆ ಕಾಫಿ ಉತ್ಪಾದನೆಯಲ್ಲಿ ಕರ್ನಾಟಕದಲ್ಲಿ ಶೇ 71ರಷ್ಟು ಕಾಫಿಯನ್ನು ಉತ್ಪಾದಿಸಿದರೆ, ಕೇರಳದಲ್ಲಿ ಶೇ 21ರಷ್ಟು ಮತ್ತು ತಮಿಳುನಾಡಿನಲ್ಲಿ ಶೇ 5ರಷ್ಟು ಕಾಫಿ ಉತ್ಪಾದನೆ ಆಗುತ್ತದೆ.

ಸದ್ಯ ಕಾಫಿ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆ ಹೋಟೆಲ್​, ರೆಸ್ಟೋರೆಂಟ್​ ಮತ್ತು ಕಾಫಿ ಶಾಪ್​ಗಳಲ್ಲಿ ಒಂದು ಕಪ್​ ಕಾಫಿ ಬೆಲೆ ಕೂಡ ಏರಿಕೆಯಾಗಲಿದೆ. ಇತ್ತೀಚಿಗೆ ಹಾಲಿನ ದರ ಏರಿಕೆಯಿಂದ ಕಾಫಿ ಬೆಲೆ ಹೆಚ್ಚಿಸಿದ್ದು, ಇದೀಗ ಮತ್ತೊಂದು ಸುತ್ತಿನ ಬೆಲೆ ಏರಿಕೆಗೆ ಮುಂದಾಗುವ ಸಾಧ್ಯತೆ ಇದೆ. ಸಾಮಾನ್ಯ ಹೋಟೆಲ್​ಗಳಲ್ಲಿ ಸದ್ಯ ಇದೀಗ ಕಾಫಿ ಬೆಲೆ 12 ರೂ. ನಿಂದ 15 ರೂ. ಇದೆ. ರಸ್ತೆ ಬದಿಯ ವ್ಯಾಪಾರಿಗಳು ಕೂಡ ಹಾಲಿನ ಬೆಲೆ ಏರಿಕೆ ಹಿನ್ನೆಲೆ ಕಾಫಿ ದರವನ್ನು ಶೇ 10ರಿಂದ 20ರಷ್ಟು ಹೆಚ್ಚಿಸಿದ್ದಾರೆ.

ಬ್ಯಾಗ್​ಗೆ 2000 ರೂ. ಏರಿಕೆ: ಕಾಫಿ ದರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಏರಿಕೆ ಕಾಣುತ್ತಿರುವ ಕುರಿತು ಮಾತನಾಡಿರುವ ಚಿಕ್ಕಮಗಳೂರಿನ ಕಾಫಿ ಬೆಳೆಗಾರರಾದ ಸುಜಿತ್​ ವಜುವಳ್ಳಿ ಬಿಳಿಯಪ್ಪ ಗೌಡ, ನಾವು 50 ಕೆಜಿ ಬ್ಯಾಗ್​​ಗೆ 6,200 ರೂ. ಪಡೆಯುತ್ತಿದ್ದೇವೆ. ಕಳೆದ ವರ್ಷ ನಾವು 3000 ದಿಂದ 3500 ರೂ. ಪಡೆಯುತ್ತಿದ್ದೆವು. ಇದೀಗ ಈ ಬ್ಯಾಗ್​ಗೆ 2000 ಏರಿಕೆ ಕಂಡಿದೆ. ಈ ದರ ಮುಂದೆ ಹೆಚ್ಚಲಿದ್ದು, ಮುಂದಿನ ವರ್ಷಕ್ಕೆ ಮತ್ತೆ ₹ 1 ಸಾವಿರ ಹೆಚ್ಚುವ ನಿರೀಕ್ಷೆ ಇದೆ ಎಂದರು.

ಕಾಫಿ ಬೆಳೆಗಾರರಲ್ಲಿ ಮಾರಾಟ ದರ ಕಡಿಮೆ ಇದ್ದು, ಕಾರ್ಮಿಕರ ಕೂಲಿ ಮತ್ತು ಅದರ ನಿರ್ವಹಣೆ ವೆಚ್ಚ, ರಸಗೊಬ್ಬರ ದರ ಏರಿಕೆಯಾಗುತ್ತಿದೆ ಎಂಬ ಕೊರಗಿದೆ. ಕಳೆದ 10-15 ವರ್ಷದಿಂದ ಕಾಫಿ ದರ 2,800ರಿಂದ 3,500ಕ್ಕೆ ನಿಂತಿದೆ. ಆದರೆ ಕಾರ್ಮಿಕರ ಕೂಲಿ 150ರೂ. ನಿಂದ 450 ರೂ. ಆಗಿದೆ. ಒಂದು ಕಾಫಿ ಗಿಡದ ನಿರ್ವಹಣೆ 300 ರೂ. ನಿಂದ 1000 ರೂ. ತಲುಪಿದೆ. ಇದು ಹೊರೆಯಾಗಿದ್ದು, ಬ್ಯಾಂಕ್​ ಸಾಲ ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಆದರೆ, ಇದೀಗ ಬೆಲೆ ಏರಿಕೆ ಕಾಣುತ್ತಿರುವ ಹಿನ್ನೆಲೆ ಪ್ಲಾಂಟರ್​ಗಳು ಕೊಂಚ ಹಣ ಉಳಿಸಬಹುದಾಗಿದೆ ಎಂದಿದ್ದಾರೆ.

ಹವಾಮಾನದೊಡನೆ ಆಡುವ ಜೂಜಾಟದ ಬೆಳೆ: ಭಾರತದಲ್ಲಿ ಕಾಫಿ ಉತ್ಪಾದನೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಕಳೆದ ವರ್ಷದ ಭಾರೀ ಮಳೆಯಿಂದ ಈ ವರ್ಷ ಉತ್ಪಾದನೆ ಇಳಿಕೆಯಾಗಿದೆ. ಈ ವರ್ಷ ಮಳೆ ಕೊರತೆಯಿಂದ ಇಳುವರಿಯೂ ಕಡಿಮೆಯಾಗಿದೆ. ಕಾಫಿ ಸೂಕ್ಷ್ಮ ಬೆಳೆಯಾಗಿದ್ದು, ಇದನ್ನು ಅಧಿಕ ತಾಪಮಾನ ಮತ್ತು ಅಧಿಕ ಮಳೆ ಪ್ರದೇಶದಲ್ಲಿ ಬೆಳೆಯಲು ಸಾಧ್ಯವಿಲ್ಲ.

ಭಾರತೀಯ ಕಾಫಿ ಮಾರುಕಟ್ಟೆ ಜಾಗತಿಕ ಮಾರುಕಟ್ಟೆ ಟ್ರೆಂಡ್​ ಮೇಲೆ ಪರಿಣಾಮ ಬೀರುವುದಿಲ್ಲ. ಕಾರಣ ಬೇರೆ ದೇಶಗಳು ಭಾರತಕ್ಕಿಂತ ಹೆಚ್ಚಿನ ಕಾಫಿ ಉತ್ಪಾದನೆ ಮಾಡುತ್ತವೆ. ಬ್ರೆಜಿಲ್​ಮ ಗುಂಟೆಮಾಲಾ, ಇಥಿಯೋಪಿಯಾ ಮತ್ತು ವಿಯೆಟ್ನಾಂನಲ್ಲಿ ಭಾರೀ ಪ್ರಮಾಣದಲ್ಲಿ ಕಾಫಿ ಬೆಳೆಯಲಾಗುವುದು. ವಿಯೆಟ್ನಾಂನಲ್ಲಿ ರೂಬೊಸ್ಟಾ ಕಾಫಿ ಬೆಳೆಗಾರರು ವಿವಿಧ ರೀತಿಯ ಬೆಳೆಗಳನ್ನು ಬೆಳೆಯಲು ಮುಂದಾಗುತ್ತಿದ್ದಾರೆ. ಅವರು ಡ್ರಾಗನ್​ ಹಣ್ಣು, ಅವಕಾಡೊ ಬೆಳೆಗೆ ಕಾಫಿಗಿಂತ ಹೆಚ್ಚಿನ ಬೆಲೆಯನ್ನು ಪಡೆಯುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ರೊಬಾಸ್ಟಾ ಕಾಫಿ ಕಡಿಮೆಯಾದ ಹಿನ್ನೆಲೆ ಇಲ್ಲಿನ ಕಾಫಿ ಬೆಳೆಗೆ ಉತ್ತಮ ಬೆಲೆ ಬಂದಿದೆ. ಡಾಲರ್​ ಬೆಲೆಯ ಏರಿಳಿತ ದರದ ಮೇಲೆ ಪರಿಣಾಮ ಬೀರಲಿದೆ. ಇದು ನಮ್ಮ ಮಾರುಕಟ್ಟೆ ಮತ್ತು ಜಾಗತಿಕ ಮಾರುಕಟ್ಟೆ ಮೇಲೆ ಪರಿಣಾಮ ಬೀರುವುದಿಲ್ಲ. ಕಾಫಿ ಮಾರುಕಟ್ಟೆಯೆಂಬುದು ಹವಾಮಾನ ಪರಿಸ್ಥಿತಿಯ ಜೂಜಾಟವಾಗಿದೆ. ಬ್ರೆಜಿಲ್​ನಲ್ಲಿ ಬರ ಅಥವಾ ಪ್ರವಾಹದಿಂದಾಗಿ ಇಲ್ಲಿ ಕಾಫಿ ದರ ಹೆಚ್ಚುತ್ತದೆ. ಈ ಮುಂಚೆಗೆ ಹೋಲಿಕೆ ಮಾಡಿದರೆ, ಈ ಬಾರಿ ಕೊಂಚ ಉತ್ತಮ ಬೆಲೆ ಕಾಣಬಹುದಾಗಿದೆ ಎಂದು ಗೌಡ ವಿವರಿಸಿದ್ದಾರೆ.

ಇದನ್ನೂ ಓದಿ: ಮುಂಗಾರು ಹಂಗಾಮಿನ ಬೆಳೆ ಬೆಳೆಯಲು ಭದ್ರಾ ನಾಲೆಗಳಿಗೆ ಇಂದಿನಿಂದ ಹರಿಯಲಿದೆ ನೀರು.. ರೈತರಲ್ಲಿ ಮೊಗದಲ್ಲಿ ಮಂದಹಾಸ

Last Updated : Aug 10, 2023, 12:57 PM IST

ABOUT THE AUTHOR

...view details