ಚಿಕ್ಕಮಗಳೂರು: ಬೃಹತ್ ಗಾತ್ರದ ನಾಗರಹಾವೊಂದು ಕೋಳಿ ಮೊಟ್ಟೆಗಳನ್ನು ನುಂಗಿ ಮುಂದೆ ಹೋಗಲೂ ಸಾಧ್ಯವಾಗದೆ ಒದ್ದಾಡುತ್ತಿದ್ದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
14 ಮೊಟ್ಟೆ ನುಂಗಿ ಒದ್ದಾಡುತ್ತಿದ್ದ ನಾಗಪ್ಪ... ಮುಂದೇನಾಯ್ತು!? - undefined
ಬರೋಬ್ಬರಿ 14 ಮೊಟ್ಟೆಗಳನ್ನು ನುಂಗಿ ಮುಂದೆ ಹೋಗಲೂ ಸಾಧ್ಯವಾಗದೆ ಒದ್ದಾಡುತ್ತಿದ್ದ ನಾಗರಹಾವನ್ನು ಉರಗ ತಜ್ಞ ಆರೀಷ್ ರಕ್ಷಣೆ ಮಾಡಿ ಚಾರ್ಮಾಡಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಡವನ ದಿಣ್ಣೆ ಗ್ರಾಮದ ಮಂಜಯ್ಯ ಎಂಬುವರ ಮನೆ ಅಂಗಳದಲ್ಲಿ ಕಾಣಿಸಿಕೊಂಡ ನಾಗರಹಾವೊಂದು ಬರೋಬ್ಬರಿ 14 ಮೊಟ್ಟೆಗಳನ್ನು ನುಂಗಿದೆ. ಒಂದೇ ಬಾರಿಗೆ ಅಷ್ಟು ಮೊಟ್ಟೆಗಳನ್ನು ನುಂಗಿದ ಪರಿಣಾಮ ಹಾವು ಸರಿದಾಡಲಾಗದೆ ಸ್ಥಳದಲ್ಲಿಯೇ ಪ್ರಾಣ ಉಳಿಸಿಕೊಳ್ಳುಲು ಓದ್ದಾಟ ನಡೆಸಿದೆ.
ಇನ್ನು ಇದನ್ನು ಕಂಡವರು ಕೂಡಲೇ ಮೂಡಿಗೆರೆ ನಿವಾಸಿ, ಉರಗ ತಜ್ಞ ಆರೀಷ್ ಅವರನ್ನು ಸ್ಥಳಕ್ಕೆ ಕರೆಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಸ್ನೇಕ್ ಆರೀಫ್ ನಾಗರಹಾವನ್ನು ಹಿಡಿದು ನುಂಗಿದ್ದ ಎಲ್ಲಾ ಮೊಟ್ಟೆಗಳನ್ನು ಹೊರ ಹಾಕಿಸಿದ್ದಾರೆ. ನಂತರ ಹಾವು ಸಹಜ ಸ್ಥಿತಿಗೆ ಬಂದಿದ್ದು, ಬರೋಬ್ಬರಿ 7 ಅಡಿಯಿದ್ದ ನಾಗರ ಹಾವನ್ನು ಸ್ನೇಕ್ ಆರೀಫ್ ಸುರಕ್ಷಿತವಾಗಿ ಚಾರ್ಮಾಡಿ ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ.