ಬೆಂಗಳೂರು:ಸಮ್ಮಿಶ್ರ ಸರ್ಕಾರಕ್ಕೆ ನಿರ್ದಿಷ್ಟ ಗುರಿಯಿಲ್ಲ. ಜನಪರ ಯೋಜನೆಗಳನ್ನು ರೂಪಿಸಬೇಕೆಂಬ ಜವಾಬ್ದಾರಿ ಇಲ್ಲ, ಜನರ ಬಗ್ಗೆ ಕಾಳಜಿಯೂ ಇಲ್ಲ. ಕೇವಲ ಎಟಿಎಂ ರನ್ ಮಾಡಲು ಮಾತ್ರ ಸಮ್ಮಿಶ್ರ ಸರ್ಕಾರ ನಡೆಸುತ್ತಿದ್ದಾರೆ ಎಂದು ಚಿಕ್ಕಮಗಳೂರು ಶಾಸಕ ಸಿ ಟಿ ರವಿ ಸಮ್ಮಿಶ್ರ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.
ರಮಡ ರೆಸಾರ್ಟ್ಗೆ ಆಗಮಿಸಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.ಒಂದು ವೇಳೆ ದೋಸ್ತಿಗಳ ಬಳಿ ಮ್ಯಾಜಿಕ್ ನಂಬರ್ ಇದ್ದಲ್ಲಿ ಬುಧವಾರದವರೆಗೆ ಕಾಯುವ ಅಗತ್ಯವಿಲ್ಲ. ಸೋಮವಾರ ಬಹುಮತ ಸಾಬೀತುಪಡಿಸಬಹುದು. ಇವರ ವರ್ತನೆ ನೋಡಿದರೆ ಅವರ ಬಳಿ ಮ್ಯಾಜಿಕ್ ನಂಬರ್ ಇಲ್ಲ. ದೋಸ್ತಿಗಳು ಏನೇ ಮಾಡಿದರು ಅದು ಬರೀ ಸರ್ಕಸ್ ಆಗತ್ತೆ ಸಕ್ಸಸ್ ಆಗಲ್ಲ. ಹೀಗಾಗಿ ಸಭಾಧ್ಯಕ್ಷರು ಆದಷ್ಟು ಬೇಗ ನಿರ್ಣಯ ಕೈಗೊಳ್ಳಬೇಕು ಎಂದರು.