ಚಿಕ್ಕಮಗಳೂರು:ಕಾಫಿನಾಡಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಜೆಸಿಬಿ ಮತ್ತೆ ಘರ್ಜನೆ ಮಾಡಿದೆ. ಅಕ್ರಮ ಮನೆಗಳನ್ನು ನಗರಸಭೆ ಸಿಬ್ಬಂದಿ ನೆಲ ಸಮ ಮಾಡಿದ್ದು, ವಲಸಿಗರು ನಿರ್ಮಿಸಿಕೊಂಡಿದ್ದ ಮನೆಗಳನ್ನು ಸಂಪೂರ್ಣವಾಗಿ ಕೆಡವಲಾಗಿದೆ.
ಚಿಕ್ಕಮಗಳೂರು ನಗರದ ಹೊರವಲಯದ ಇಂದಿರಾಗಾಂಧಿ ಬಡಾವಣೆಯಲ್ಲಿ ಕೆಲವರು ಅನಧಿಕೃತವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದರು. ಅನಧಿಕೃತ ಮನೆಗಳ ಪಟ್ಟಿಯನ್ನು ನಗರಸಭೆ ತಯಾರಿಸಿದ್ದು, 20ಕ್ಕೂ ಹೆಚ್ಚು ಅನಧಿಕೃತ ಮನೆಗಳನ್ನು ಹೊರ ರಾಜ್ಯದ ಜನರು ನಿರ್ಮಿಸಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಕೇಳಿಬಂದಿತ್ತು.
ಅಕ್ರಮ ಮನೆ ನಿರ್ಮಾಣ ಆರೋಪ: ಚಿಕ್ಕಮಗಳೂರಿನಲ್ಲಿ ಮತ್ತೆ ಸದ್ದು ಮಾಡಿದ ಜೆಸಿಬಿ ಅಂತೆಯೇ, ಅಕ್ರಮ ವಲಸಿಗರ ವಿರುದ್ಧ ನಗರಸಭೆ ಸಮರ ಸಾರಿದ್ದು, 5ಕ್ಕೂ ಹೆಚ್ಚು ಮನೆಗಳನ್ನು ಸಿಬ್ಬಂದಿ ನೆಲಸಮ ಮಾಡಿದ್ದಾರೆ. ಮನೆಗಳ ತೆರವು ಕಾರ್ಯದಿಂದ ಅಲ್ಲಿನ ನಿವಾಸಿಗಳು ಕಂಗಾಲಾಗಿದ್ದು, ಜೆಸಿಬಿ ಎದುರುಗಡೆ ನಿಂತು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೇ, ಜೆಸಿಬಿಯನ್ನು ನಮ್ಮ ಮೇಲೆ ಹತ್ತಿಸಿ ಮನೆ ತೆರವು ಬೇಡ ಎಂದು ನಿವಾಸಿಗಳು ಆಕ್ರೋಶದಿಂದ ನುಡಿದರು. ಈ ನಿವಾಸಿಗಳಿಗೆ ಕೆಲ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ.
ಇದನ್ನೂ ಓದಿ:ಕೊಡಗಿನಲ್ಲಿ ಮತ್ತೆ ಕಂಪನ: 7ನೇ ಬಾರಿ ನಡುಗಿದ ಭೂಮಿ, ಜನರಲ್ಲಿ ಹೆಚ್ಚಿದ ಆತಂಕ