ಚಿಕ್ಕಮಗಳೂರು :ನೀರಿನ ಟ್ಯಾಂಕ್ (ಸಂಪ್)ಸ್ವಚ್ಛತೆಗೆ ಇಳಿದಿದ್ದಾಗ ಉಸಿರುಗಟ್ಟಿ ಇಬ್ಬರು ಸಾವನ್ನಪ್ಪಿದ್ದು, ಓರ್ವನ ಸ್ಥಿತಿ ಗಂಭೀರವಾಗಿರುವ ಘಟನೆ ಜಿಲ್ಲೆಯ ಕಡೂರು ಪಟ್ಟಣದ ದೊಡ್ಡಪೇಟೆಯಲ್ಲಿ ನಡೆದಿದೆ.
ಕುಮಾರ್(50) ಹಾಗೂ ವಸಂತ್ (35) ಸಾವನ್ನಪ್ಪಿದ ದುರ್ದೈವಿಗಳು. ಮತ್ತೋರ್ವ ವ್ಯಕ್ತಿ ಕಲೀಂನ ಸ್ಥಿತಿ ಚಿಂತಾಜನಕವಾಗಿದೆ. ಈತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಮನೆಯ ಮುಂದಿದ್ದ ಟ್ಯಾಂಕ್ ಕ್ಲೀನ್ ಮಾಡುವಾಗ ಈ ದುರಂತ ಜರುಗಿದೆ.