ಕರ್ನಾಟಕ

karnataka

ETV Bharat / state

ಮಲೆನಾಡ ಸ್ವಚ್ಛತೆಗೆ ಮುಂದಾದ ತರಬೇತಿ ನಿರತ ಮಹಿಳಾ ಪೊಲೀಸ್ ಕಾನ್ಸ್​ಟೇಬಲ್ಸ್​

ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳಾದ ಸೀತಾಳಯ್ಯನ ಮಠದಿಂದ ಮುಳ್ಳಯ್ಯನಗಿರಿ ತುದಿಯವರೆಗೂ ಸ್ವಚ್ಛತಾ ಕಾರ್ಯ ನಡೆಯಿತು.

ಮಲೆನಾಡ ಸ್ವಚ್ಛತೆ
ಮಲೆನಾಡ ಸ್ವಚ್ಛತೆ

By

Published : Dec 14, 2020, 5:36 PM IST

ಚಿಕ್ಕಮಗಳೂರು: ಪ್ರತಿನಿತ್ಯ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಗಿರಿಶ್ರೇಣಿಯ ತಾಣಗಳಲ್ಲಿ ಚಿಕ್ಕಮಗಳೂರಿನ ತರಬೇತಿ ನಿರತ ಮಹಿಳಾ ಪೊಲೀಸ್ ಕಾನ್ಸ್​ಟೇಬಲ್ಸ್​ ಹಾಗೂ ಚಿಕ್ಕಮಗಳೂರು ಅಡ್ವೆಂಚರ್ ಸ್ಪೋರ್ಟ್ಸ್​ ಕ್ಲಬ್‍ನ ಸದಸ್ಯರು ಸಮರೋಪಾದಿಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು.

ಸೀತಾಳಯ್ಯನ ಮಠದಲ್ಲಿ ಸ್ವಚ್ಛತೆ

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಹೆಚ್‌. ಅಕ್ಷಯ್ ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸುವ ಮೂಲಕ ಇತರರಿಗೆ ಸ್ಫೂರ್ತಿ ತುಂಬಿದರು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬರೋಬ್ಬರಿ 80 ಚೀಲದಷ್ಟು ಕಸ ಕಡ್ಡಿಗಳನ್ನು ಸಂಗ್ರಹಿಸಿದ್ದು, ಪ್ರತಿಷ್ಠಿತ ಪ್ರವಾಸಿ ತಾಣಗಳಾದ ಸೀತಾಳಯ್ಯನ ಮಠದಿಂದ ಆರಂಭವಾದ ಸ್ವಚ್ಛತಾ ಕಾರ್ಯ ಮುಳ್ಳಯ್ಯನ ಗಿರಿ ತುದಿಯವರೆಗೂ ಮುಂದುವರೆಯಿತು.

ಬರೋಬ್ಬರಿ 80 ಚೀಲದಷ್ಟು ಕಸ ಕಡ್ಡಿ ಸಂಗ್ರಹ

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್ ಮಾತನಾಡಿ, ಪ್ರವಾಸಿಗರು ನಿಸರ್ಗ ತಾಣಗಳಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು. ಪ್ರವಾಸಿ ಸ್ಥಳಗಳಲ್ಲಿ ವ್ಯಾಪಾರ ಮಾಡುವಂತವರು ಸ್ವಚ್ಛತೆಯನ್ನು ಕಾಪಾಡಬೇಕು. ಇಲ್ಲವಾದಲ್ಲಿ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು.

ABOUT THE AUTHOR

...view details