ಕರ್ನಾಟಕ

karnataka

ETV Bharat / state

ಅನಧಿಕೃತ ಅಂಗಡಿ ತೆರವು ಕಾರ್ಯಾಚರಣೆ: ಪೌರ ಕಾರ್ಮಿಕರು, ವ್ಯಾಪಾರಿಗಳ ನಡುವೆ ಗಲಾಟೆ - chikmagalore latest news updates

ಅನಧಿಕೃತ ಅಂಗಡಿ ತೆರವು ಕಾರ್ಯಾಚರಣೆ ವೇಳೆ ಅಂಗಡಿ ಮಾಲೀಕ ಮತ್ತು ಪೌರ ಕಾರ್ಮಿಕರ ನಡುವೆ ಗಲಾಟೆ ನಡೆದಿರುವ ಪ್ರಕರಣ ಚಿಕ್ಕಮಗಳೂರಿನಲ್ಲಿ ನಡೆದಿದೆ.

clashes between panchayat staffs and foothpath shops owners
ಪಂಚಾಯಿತಿ ಸಿಬ್ಬಂದಿ, ಅಂಗಡಿ ಮಾಲೀಕರ ನಡುವೆ ಗಲಾಟೆ

By

Published : Feb 13, 2021, 2:41 PM IST

ಚಿಕ್ಕಮಗಳೂರು: ಅನಧಿಕೃತ ಅಂಗಡಿ ತೆರವಿಗೆ ಮುಂದಾದಾಗ ಅಂಗಡಿ ಮಾಲೀಕ ಮತ್ತು ಪೌರ ಕಾರ್ಮಿಕರ ನಡುವೆ ತಳ್ಳಾಟ - ನೂಕಾಟ ನಡೆದಿರುವ ಘಟನೆ ನಡೆದಿದೆ.

ಪಂಚಾಯಿತಿ ಸಿಬ್ಬಂದಿ, ಅಂಗಡಿ ಮಾಲೀಕರ ನಡುವೆ ಗಲಾಟೆ

ಜಿಲ್ಲೆಯ ಕೊಪ್ಪ ತಾಲೂಕಿನ ನಗರದಲ್ಲಿ ಬೀದಿ ಬದಿ ವ್ಯಾಪಾರ ಮಾಡುವ ಕೆಲವರ ವಿರುದ್ಧ ಈ ಹಿಂದೆ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕ ದೂರು ಬಂದಿತ್ತು. ಹಾಗಾಗಿ ಸಭೆಯಲ್ಲಿ ಅನಧಿಕೃತ ಅಂಗಡಿಗೆ ತೆರವಿಗೆ 15 ದಿನಗಳ ಗಡುವು ನೀಡಲಾಗಿತ್ತು. ಈ ಹಿನ್ನೆಲೆ ಪಟ್ಟಣ ಪಂಚಾಯತ್ ಸಿಬ್ಬಂದಿ ಅನಧಿಕೃತ ಅಂಗಡಿ ತೆರವಿಗೆ ಮುಂದಾದಾಗ ಅಂಗಡಿ ಮಾಲೀಕ ಮತ್ತು ಪೌರ ಕಾರ್ಮಿಕರ ನಡುವೆ ಜಗಳ ನಡೆದಿದೆ.

ಹಠಕ್ಕೆ ಬಿದ್ದಂತೆ ಪಟ್ಟಣ ಪಂಚಾಯಿತಿ ಸಿಬ್ಬಂದಿ ಅನಧಿಕೃತ ಬೀದಿ ವ್ಯಾಪಾರಿಗಳನ್ನು‌ ಖಾಲಿ ಮಾಡಿಸಲು ಮುಂದಾಗಿದ್ರು. ಈ ವೇಳೆ, ಪಟ್ಟಣ ಪಂಚಾಯಿತಿ ಸಿಬ್ಬಂದಿ ಹಾಗೂ ಬೀದಿ ಬದಿ ವ್ಯಾಪಾರಿಗಳ ನಡುವೆ ಮಾತಿನ ಚಕಮಕಿ ನಡೆದು, ಇಬ್ಬರೂ ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಗಿದೆ. ಈ ವೇಳೆ ಕೊಪ್ಪ ಪೊಲೀಸರು ಮಧ್ಯಪ್ರವೇಶಿಸಿ ಗಲಾಟೆಯನ್ನು ತಣ್ಣಗಾಗಿಸಿದ್ದಾರೆ.
ಇದನ್ನೂ ಓದಿ:ಒಂದು ವಿಚಾರವಾಗಿ ನನ್ನ ತಂದೆ, ಅಜ್ಜಿ ಹತ್ಯೆಯಾದ ಬಗ್ಗೆ ನನಗೆ ಹೆಮ್ಮೆಯಿದೆ: ರಾಗಾ ಸಮರ್ಥನೆ

ABOUT THE AUTHOR

...view details