ಚಿಕ್ಕಮಗಳೂರು:ನಗರದಲ್ಲಿ ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಶಾಲೆಯಲ್ಲಿ ಇಬ್ಬರು ಪ್ರಾಂಶುಪಾಲರ ಮಧ್ಯೆ ಮಾರಾಮಾರಿ ಆಗಿರುವ ಘಟನೆ ನಡೆದಿದೆ.
ಇಬ್ಬರು ಪ್ರಾಂಶುಪಾಲರ ನಡುವೆ ವಾರ್: ಶಾಲೆ ಮಾನ ನಿಮಿಷದಲ್ಲಿ ಹರಾಜು! ವಿಡಿಯೋ - ಚಿಕ್ಕಮಳೂರಿನಲ್ಲಿ ಪ್ರಿನ್ಸಿಪಲ್ಗಳ ನಡುವೆ ಜಗಳ,
ಇಬ್ಬರು ಪ್ರಾಚಾರ್ಯರ ಮಧ್ಯೆ ಮಾರಾಮಾರಿ ನಡೆದಿದ್ದು, ಶಾಲೆಯ ಮಾನ ಒಂದೇ ನಿಮಿಷದಲ್ಲಿ ಹರಾಜಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಇಬ್ಬರ ಪ್ರಿನ್ಸಿಪಲ್ಗಳ ನಡುವೆ ವಾರ್
ಪುರುಷರು, ಮಹಿಳೆಯರೆನ್ನದೆ ಸಿಬ್ಬಂದಿ ಬಡಿದಾಡಿಕೊಂಡಿದ್ದು, ಚಿಕ್ಕಮಗಳೂರು ನಗರದ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ ಎನ್ನಲಾಗ್ತಿದೆ.
ಆರ್ಥಿಕ ವ್ಯವಹಾರಕ್ಕೆ ಶಾಲೆಯ ಮಾನ ಹರಾಜಾಗಿದೆ. ಸಲೀಂ, ಜಮೀರ್ ಇಬ್ಬರು ಪ್ರಾಂಶುಪಾಲರ ನಡುವೆ ಜಗಳ ಆಗಿದೆ. ಶಾಲಾ ಕೊಠಡಿಯಲ್ಲಿಯೇ ಶಿಕ್ಷಕರ ನಡುವೆ ಗಲಾಟೆ ನಡೆದಿದ್ದು, ಶಾಲೆಯಲ್ಲಿ ಬಡಿದಾಡಿಕೊಂಡ ವಿಡಿಯೋ ಫುಲ್ ವೈರಲ್ ಆಗುತ್ತಿದೆ.
Last Updated : Jun 5, 2020, 5:21 PM IST