ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು : ನೆರೆ ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿದ ಹೆಚ್​ಡಿಕೆ - Former CM HDK

ಚಿಕ್ಕಮಗಳೂರು ಜಿಲ್ಲೆಯ ನೆರೆ ಬಾಧಿತ ಪ್ರದೇಶಗಳಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಕಳಸಲದಲ್ಲಿ ಸಂತ್ರಸ್ಥರ ಅಹವಾಲು ಸ್ವೀಕರಿಸಿದ ಹೆಚ್ಡಿಕೆಯೊಂದಿಗೆ ಜನರು ತಮ್ಮ ಅಳಲನ್ನು ತೋಡಿಕೊಂಡರು.

ಚಿಕ್ಕಮಗಳೂರು : ನೆರೆ ಪೀಡಿತ ಪ್ರದೇಶಗಳಿಗೆ ಹೆಚ್ಡಿಕೆ ಭೇಟಿ

By

Published : Aug 19, 2019, 7:45 PM IST

ಚಿಕ್ಕಮಗಳೂರು:ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಿಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನೆರೆ ಬಾಧಿತ ಪ್ರದೇಶಗಳಾದ ಮೂಡಿಗೆರೆ ತಾಲೂಕಿನ ನೆಲ್ಲಿಬೀಡು, ಸಂಸೆ, ಕಳಸ, ಹಿರೇಭೈಲು ಗ್ರಾಮಕ್ಕೆ ಭೇಟಿ ನೀಡಿದರು. ಈ ವೇಳೆ ಕಳಸದಲ್ಲಿ ನೆರೆ ಸಂತ್ರಸ್ತರಿಂದ ಅಹವಾಲು ಸ್ವೀಕರಿಸಿದ ಕುಮಾರಸ್ವಾಮಿಯೊಂದಿಗೆ ಜನರು ತಮ್ಮ ನೋವನ್ನು ತೋಡಿಕೊಂಡಿದ್ದು, ಕುದುರೆಮುಖದಲ್ಲಿ 2 ಸಾವಿರಕ್ಕೂ ಅಧಿಕ ಕ್ವಾಟ್ರಾಸ್ ಮನೆಗಳು ಪಾಳು ಬಿದ್ದಿವೆ. ನಿರಾಶ್ರಿತರಿಗೆ ಆ ಮನೆಗಳನ್ನು ನೀಡಿದರೇ ಅನುಕೂಲ ಆಗಲಿದೆ ಎಂದೂ ಮನವಿ ಮಾಡಿದರು.

ನೆರೆ ಪೀಡಿತ ಪ್ರದೇಶಗಳಿಗೆ ಹೆಚ್ಡಿಕೆ ಭೇಟಿ

ಈ ಸಂಧರ್ಭದಲ್ಲಿ ಹೆಚ್.ಡಿ ಕುಮಾರಸ್ವಾಮಿಗೆ ಮಾಜಿ ಸಚಿವ ನಿಂಗಯ್ಯ, ಉಪ ಸಭಾಪತಿ ಎಸ್ ಎಲ್ ಧರ್ಮೇಗೌಡ, ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಭೋಜೇಗೌಡ ಸಾಥ್ ನೀಡಿದರು.

ABOUT THE AUTHOR

...view details