ಚಿಕ್ಕಮಗಳೂರು: ಬಸ್ಸಿನ ಟೈರ್ಗೆ ಸಿಕ್ಕಿ ಬೈಕ್ ಸವಾರನ ತಲೆ ಅಪ್ಪಚ್ಚಿಯಾದ ಭೀಕರ ಘಟನೆ ತಾಲೂಕಿನ ದೇವರಹಳ್ಳಿ ಗೇಟ್ ಬಳಿ ನಡೆದಿದೆ.
ಹೆಲ್ಮೆಟ್ ಧರಿಸಿದ್ದರೂ ಬೈಕ್ ಸವಾರನ ತಲೆ ಅಪ್ಪಚ್ಚಿ! - Chikkamagaluru Bike Accident latest news
ಬಸ್ಸಿನ ಟೈರ್ಗೆ ಸಿಕ್ಕಿ ಬೈಕ್ ಸವಾರನ ತಲೆ ಅಪ್ಪಚ್ಚಿಯಾದ ಭೀಕರ ಘಟನೆ ತಾಲೂಕಿನ ದೇವರಹಳ್ಳಿ ಗೇಟ್ ಬಳಿ ನಡೆದಿದೆ.
ಹೆಲ್ಮೆಟ್ ದರಿಸಿದ್ದರೂ ಉಳಿಯಲಿಲ್ಲ ಪ್ರಾಣ..
ಚಿಕ್ಕಮಗಳೂರು ತಾಲೂಕಿನ ಕರಿ ಸಿದ್ದನಹಳ್ಳಿ ನಿವಾಸಿ ಸೋಮಶೇಖರ್ (26) ಮೃತಪಟ್ಟವ ಎನ್ನಲಾಗಿದೆ. ಸೋಮಶೇಖರ್ ಬೈಕ್ನಲ್ಲಿ ಹೋಗುತ್ತಿದ್ದಾಗ ಸರ್ಕಾರಿ ಬಸ್ಸಿಗೆ ಬೈಕ್ ಟಚ್ ಆಗಿದೆ. ಪರಿಣಾಮ ಸೋಮಶೇಖರ್ ರಸ್ತೆಗೆ ಬಿದ್ದಿದ್ದು, ಈ ವೇಳೆ ಬಸ್ಸಿನ ಹಿಂಬದಿ ಟೈರ್ ತಲೆ ಮೇಲೆ ಹರಿದಿದೆ. ಅಪಘಾತದ ವೇಳೆ ಸೋಮಶೇಖರ್ ಹೆಲ್ಮೆಟ್ ಹಾಕಿದ್ದರೂ ತಲೆ ಸಂಪೂರ್ಣ ಅಪ್ಪಚ್ಚಿಯಾಗಿದೆ. ಸ್ಥಳದಲ್ಲೇ ಆತನ ಪ್ರಾಣ ಪಕ್ಷಿ ಹಾರಿ ಹೋಗಿದೆ.
ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.