ಚಿಕ್ಕಮಗಳೂರು:ಸಬ್ ರಿಜಿಸ್ಟ್ರಾರ್ ಬಳಿ ಕಂದಾಯ ಸಚಿವ ಆರ್ ಅಶೋಕ್ ಅವರ ಪಿ.ಎ ಹಣ ಕೇಳಿದ ಆರೋಪ ಕುರಿತು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಪ್ರತಿಕ್ರಿಯೆ ಇದು ಸರ್ಕಾರಕ್ಕೆ ಮುಜುಗರ ಉಂಟು ಮಾಡಿರುವ ಸಂಗತಿ. ಅಶೋಕ್ ಅವರನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಸಬ್ ರಿಜಿಸ್ಟ್ರಾರ್, ರೆವೆನ್ಯೂ ಇನ್ಸ್ಪೆಕ್ಟರ್ ಗಳಿಂದ ದುಡ್ಡು ಕೇಳೋ ದುಸ್ಥಿತಿ ಅಶೋಕ್ ಗೆ ಬಂದಿಲ್ಲ, ಬರೋದು ಇಲ್ಲ. ಸಚಿವ ಆರ್.ಅಶೋಕ್ ಆ ಜಾಯಮಾನದವರಲ್ಲ ಎಂದು ಸಮರ್ಥಿಸಿಕೊಂಡರು.
ಅಶೋಕ್ ಅವರ ಪಿ.ಎ. ಆ ರೀತಿ ಕೆಲಸ ಮಾಡಿದ್ರೆ ಆತನನ್ನು ಇಟ್ಟುಕೊಳ್ಳುವುದಿಲ್ಲ. ನನಗಿರುವ ಮಾಹಿತಿ ಪ್ರಕಾರ ಆತನನ್ನ ಕೆಲಸದಿಂದ ಕಿತ್ತು ಹಾಕಿದ್ದಾರೆ ಎಂದು ಹೇಳಿದರು.
ಗಣರಾಜ್ಯೋತ್ಸವ ಆಚರಣೆ:ನಗರದ ಸುಭಾಷ್ ಚಂದ್ರ ಬೋಸ್ ಆಟದ ಮೈದಾನದಲ್ಲಿ ಸಂಭ್ರಮದ 72 ನೇ ಗಣರಾಜೋತ್ಸವ ಆಚರಿಸಲಾಯಿತು. ಸಚಿವ ಅರವಿಂದ ಲಿಂಬಾವಳಿ ಧ್ವಜಾರೋಹಣ ನಡೆಸಿದರು.
ಧ್ವಜಾರೋಹಣದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಅವರು, ಧ್ವಜವಂದನೆ ಸ್ವೀಕರಿಸಿದ್ದು, ಪೊಲೀಸ್, ಹೋಂಗಾರ್ಡ್, ಅರಣ್ಯ ಹಾಗೂ ಅಗ್ನಿ ಶಾಮಕದಳದಿಂದ ಪಥ ಸಂಚಲನ ನಡೆಸಿದರು. ಈ ಕಾರ್ಯಕ್ರಮದಲ್ಲಿ ಶಾಸಕ ಸಿ.ಟಿ.ರವಿ, ಎಂ.ಎಲ್.ಸಿ. ಎಸ್.ಎಲ್.ಭೋಜೆಗೌಡ ಸೇರಿ ಹಲವರು ಉಪಸ್ಥಿತರಿದ್ದರು.