ಚಿಕ್ಕಮಗಳೂರು: ದಾರಿಯಲ್ಲಿ ಸಿಕ್ಕ ಪರ್ಸನ್ನು ಸಂಬಂಧಪಟ್ಟ ವ್ಯಕ್ತಿಗೆ ಮುಟ್ಟಿಸುವ ಮೂಲಕ ಶಾಲಾ ವಿದ್ಯಾರ್ಥಿಗಳು ಪ್ರಾಮಾಣಿಕತೆ ಮೆರೆದಿದ್ದಾರೆ.
ದಾರಿಯಲ್ಲಿ ಸಿಕ್ಕ ಪರ್ಸ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಮಕ್ಕಳು! - ಚಿಕ್ಕಮಗಳೂರು ಸುದ್ದಿ
ಇತ್ತೀಚಿನ ದಿನಗಳಲ್ಲಿ ಪ್ರಾಮಾಣಿಕತೆ ಅನ್ನೋದು ಮರೆಯಾಗುತ್ತಿದೆ. ಅಂತದ್ದರಲ್ಲಿ ಇಲ್ಲೊಂದು ಶಾಲೆಯ ಮಕ್ಳಳು ದಾರಿಯಲ್ಲಿ ಸಿಕ್ಕ ಪರ್ಸ್ ಒಂದನ್ನು ಪ್ರಾಮಾಣಿಕವಾಗಿ ಅದರ ವಾರಸುದಾದರಿಗೆ ಹಿಂತಿರುಗಿಸಿದ್ದಾರೆ.
![ದಾರಿಯಲ್ಲಿ ಸಿಕ್ಕ ಪರ್ಸ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಮಕ್ಕಳು! school children](https://etvbharatimages.akamaized.net/etvbharat/prod-images/768-512-5490658-thumbnail-3x2-tmk.jpg)
ಜಿಲ್ಲೆಯ ಕೊಪ್ಪ ತಾಲೂಕಿನ ಹಿರೇಕೂಡಿಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಶಾಲೆ ಮುಗಿಸಿಕೊಂಡು ಮನೆಗೆ ಹೋಗುವ ವೇಳೆ ಶಿವಪುರ ರಸ್ತೆಯಲ್ಲಿರುವ ದೇವಸ್ಥಾನದ ಬಳಿ ಪರ್ಸ್ ಸಿಕ್ಕಿದೆ. ಅದರಲ್ಲಿ 2 ಸಾವಿರಕ್ಕೂ ಅಧಿಕ ಹಣವಿದ್ದು, ಎಟಿಎಂ ಕಾರ್ಡ್ಗಳು ಸೇರಿದಂತೆ ಇನ್ನಿತರೆ ಪ್ರಮುಖ ದಾಖಲೆಗಳು ಇದ್ದವು. ಇದನ್ನು ಗಮನಿಸಿದ ಶಾಲಾ ವಿದ್ಯಾರ್ಥಿಗಳಾದ ಭರತ್, ಶರತ್, ಚೈತ್ರಾ ಭೂಮಿಕಾ ಆ ಪರ್ಸ್ನ್ನು ಶಾಲೆಯ ಶಿಕ್ಷಕರಾದ ಸುಖೇಶ್ ಅವರಿಗೆ ತಂದು ನೀಡಿದ್ದಾರೆ.
ಕೂಡಲೇ ಶಾಲಾ ಶಿಕ್ಷಕ ಸುಖೇಶ್ ಪರ್ಸ್ ಕಳೆದುಕೊಂಡವರನ್ನು ಪತ್ತೆ ಮಾಡಿ ಶಾಲೆಗೆ ಕರೆಯಿಸಿ ಶಾಲಾ ಮಕ್ಕಳ ಕೈಯಿಂದಲೇ ಪರ್ಸನ್ನು ಆ ವ್ಯಕ್ತಿಗೆ ಹಿಂದಿರುಗಿಸುವಲ್ಲಿ ಯಶಸ್ವಿಯಾಗಿದ್ದು, ಮಕ್ಕಳ ಪ್ರಾಮಾಣಿಕತೆಗೆ ಶಾಲಾ ಸಿಬ್ಬಂದಿ ಹಾಗೂ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.