ಕರ್ನಾಟಕ

karnataka

By

Published : Jun 3, 2022, 2:05 PM IST

ETV Bharat / state

ಸೋರುತ್ತಿರುವ ಶಾಲೆ : ಮಳೆಯಲ್ಲಿ ಒದ್ದೆಯಾದ ಪುಸ್ತಕಗಳನ್ನು ಬಿಸಿಲಲ್ಲಿ ಒಣಗಿಸುತ್ತಿರುವ ಪುಟ್ಟ ಮಕ್ಕಳು

ಇತ್ತೀಚೆಗೆ ಸುರಿದ ಮಳೆಯಿಂದಾಗಿ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ತನೋಡಿ ಸರ್ಕಾರಿ ಶಾಲೆ ಕಟ್ಟಡದೊಳಗೆ ನೀರು ನುಗ್ಗಿ ಪಠ್ಯ ಪುಸ್ತಕಗಳು ಒದ್ದೆಯಾಗಿದ್ದವು. ಮಕ್ಕಳು ಬಿಸಿಲಿನಲ್ಲಿ ಪುಸ್ತಕಗಳನ್ನ ಒಣಗಿಸಿ ಓದಬೇಕಾದ ಸ್ಥಿತಿ ನಿರ್ಮಾಣವಾಗಿದೆ..

ನೆಂದ ಪುಸ್ತಕಗಳನ್ನು ಬಿಸಿಲಲ್ಲಿ ಒಣಗಿಸುತ್ತಿರುವ ಮಕ್ಕಳು
ನೆಂದ ಪುಸ್ತಕಗಳನ್ನು ಬಿಸಿಲಲ್ಲಿ ಒಣಗಿಸುತ್ತಿರುವ ಮಕ್ಕಳು

ಚಿಕ್ಕಮಗಳೂರು: ರಾಜ್ಯದಲ್ಲಿ ಪಠ್ಯ-ಪುಸ್ತಕ ಪರಿಷ್ಕರಣೆ ಕುರಿತು ದೊಡ್ಡ ಚರ್ಚೆಯೇ ನಡೆಯುತ್ತಿದೆ. ಇದರ ಬೆನ್ನಲ್ಲೇ ಜಿಲ್ಲೆಯ ಶಾಲೆಯೊಂದು ಮಳೆ ಬಂದ್ರೆ ಸೋರುತ್ತಿದ್ದು, ಮಳೆ ನೀರಿನಲ್ಲಿ ನೆನೆದು ಒದ್ದೆಯಾದ ಪುಸ್ತಕಗಳನ್ನ ಪುಟ್ಟ ಮಕ್ಕಳು ಬಿಸಿಲಿನಲ್ಲಿ ಒಣಗಿಸುತ್ತಿರುವ ಮನಕಲಕುವ ದೃಶ್ಯ ಕಂಡು ಬಂದಿದೆ.

ಮಳೆ ಬಂದ್ರೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ತನೋಡಿ ಸರ್ಕಾರಿ ಶಾಲೆಯೊಳಗೆ ನೀರು ನುಗ್ಗುತ್ತದೆ. ಶಾಲಾ ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆ ತಲುಪಿವೆ. 1 ರಿಂದ 5ನೇ ತರಗತಿವರೆಗೆ ಒಟ್ಟು 28 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಇವರೆಲ್ಲರೂ ಕೂಲಿ ಕಾರ್ಮಿಕರ ಮಕ್ಕಳು.

ಮಳೆ ನೀರಿಗೆ ಒದ್ದೆಯಾದ ಪುಸ್ತಕಗಳನ್ನು ಬಿಸಿಲಲ್ಲಿ ಒಣಗಿಸುತ್ತಿರುವ ಮಕ್ಕಳು..

ಪ್ರತಿ ಬಾರಿ ಮಳೆ ಬಂದಾಗಲೂ ಇದೇ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಈ ದೃಶ್ಯ ನೋಡಿಯಾದ್ರು ಸಂಬಂಧಪಟ್ಟವರು ಕೂಡಲೇ ಅಗತ್ಯ ಕ್ರಮಕೈಗೊಂಡು, ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ತನೋಡಿ ಸರ್ಕಾರಿ ಶಾಲೆ

ಇದನ್ನೂ ಓದಿ:ಮಂಡ್ಯ ವಿಶೇಷಚೇತನ ಬಾಲಕನಿಗೆ ಆಧಾರ್ ಕಾರ್ಡ್ ಮಾಡಿಸಿಕೊಟ್ಟ ಪ್ರಧಾನಿ.. ಅದೇನಾಗಿತ್ತು ಅಂದ್ರೇ..

ABOUT THE AUTHOR

...view details