ಚಿಕ್ಕಮಗಳೂರು:ಜಿಲ್ಲೆಯ ಜಿಲ್ಲಾಸ್ಪತ್ರೆಯಿಂದ ಕಳೆದ ಏಪ್ರಿಲ್ನಲ್ಲಿ ಅಕ್ರಮವಾಗಿ ಮಾರಾಟವಾಗಿದ್ದ ಮಗುವನ್ನು ಮಕ್ಕಳ ರಕ್ಷಣಾ ಘಟಕ ರಕ್ಷಣೆ ಮಾಡಿ, ಸರ್ವೋದಯ ಸಮಾಜ ಸೇವಾ ಸಂಸ್ಥೆಯ ದತ್ತು ಕೇಂದ್ರಕ್ಕೆ ನೀಡಿದೆ.
ಆಸ್ಪತ್ರೆಯ ಸಿಬ್ಬಂದಿಯಿಂದ ಅಕ್ರಮವಾಗಿ ಮಗುವನ್ನು ಪಡೆದುಕೊಂಡಿದ್ದ ಪೋಷಕರ ವಿರುದ್ಧ ದೂರು ದಾಖಲಿಸುವಂತೆ ಜಿಲ್ಲಾ ಸರ್ಜನ್‍ಗೆ ಮಕ್ಕಳ ಕಲ್ಯಾಣ ಸಮಿತಿ ಸೂಚನೆ ನೀಡಿತ್ತು. ಪೊಲೀಸರ ಸಮ್ಮುಖದಲ್ಲಿ ಶಂಕರಪುರಕ್ಕೆ ತೆರಳಿ ಮಕ್ಕಳ ರಕ್ಷಣಾ ಘಟಕ 8 ತಿಂಗಳ ಮಗುವನ್ನು ವಶಕ್ಕೆ ಪಡೆದುಕೊಂಡಿದೆ. ಮಗುವಿನ ಪೋಷಕರು ಹಾಗೂ ಅಕ್ರಮವಾಗಿ ಮಗು ಪಡೆದಿದ್ದ ಪೋಷಕರು, ಮಗುವನ್ನು ಮಾರಾಟ ಮಾಡಿದ ಆರೋಪ ಎದುರಿಸುತ್ತಿರುವ ಆಸ್ಪತ್ರೆಯ ನರ್ಸ್ನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅಂಗನವಾಡಿ, ಆಶಾಕಾರ್ಯಕರ್ತೆ, ಮಗುವಿನ ಪೋಷಕರು ವಾಸವಿರುವ ಗುಲ್ಲನ್ ಪೇಟೆ ವ್ಯಾಪ್ತಿಯ ಆಶಾ ಕಾರ್ಯಕರ್ತೆ, ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯ ಕಂಡು ಬಂದಿರುವುದರಿಂದ 5 ಜನರಿಗೂ ನೋಟಿಸ್ ಜಾರಿ ಮಾಡಲು ಸೂಚನೆ ನೀಡಲಾಗಿದೆ.