ಚಿಕ್ಕಮಗಳೂರು: ಕೋವಿಡ್ ನಿರ್ವಹಣೆ ಸರಿಯಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಕುರಿತು ಚಿಕ್ಕಮಗಳೂರಿನಲ್ಲಿ ಅವರು ಮಾತನಾಡಿದ್ದಾರೆ.
ಸರ್ಕಾರಕ್ಕೆ ಸಲಹೆ ರೂಪದಲ್ಲಿ ಪತ್ರ ಬರೆದಿದ್ದೇನೆ. ನನ್ನ ಗಮನಕ್ಕೆ ಬಂದ ವಿಚಾರವನ್ನ ಸರ್ಕಾರಕ್ಕೆ ತಿಳಿಸುವ ಕೆಲಸ ಮಾಡಿದ್ದೇನೆ.
ಹೆಲ್ಫ್ ಲೈನ್ ಜಾಸ್ತಿ ಮಾಡಬೇಕು, ರೆಮ್ಡೆಸಿವಿರ್, ಆಕ್ಸಿಜನ್ ಎಷ್ಟಿದೆ ಎಂದು ಸರ್ಕಾರ ಹೇಳಬೇಕು. ಬೆಡ್ ಎಷ್ಟು ಖಾಲಿ ಇದೆ ಎಂದು ಆಸ್ಪತ್ರೆ ಮುಂದೆ ಹೆಲ್ಪ್ ಡೆಸ್ಕ್ ಹಾಕಬೇಕು. ಈ ಎಲ್ಲಾ ಸೌಲಭ್ಯ ಇರಬೇಕು ಎಂಬ ಸಲಹೆಯನ್ನ ಸರ್ಕಾರಕ್ಕೆ ಕೊಟ್ಟಿದ್ದೇನೆ.
ಇದರಲ್ಲೂ ಲೋಪ ಹುಡುಕುವವರನ್ನ ದೇವರೇ ಕಾಪಾಡಬೇಕು. ಕಾಯಿಲೆಗೆ ಬಿಜೆಪಿ - ಜೆಡಿಎಸ್-ಕಾಂಗ್ರೆಸ್ ಅಂತಿಲ್ಲ, ಎಲ್ಲರಿಗೂ ಬರುತ್ತಿದೆ. ನಾವು ಕೂಡ ಪಕ್ಷ - ಧರ್ಮ ನೋಡದೇ ಎಲ್ಲರಿಗೂ ಸಹಾಯ ಮಾಡುತ್ತಿದ್ದೇವೆ. ಇಂತಹ ದುಃಖದ ಸಂದರ್ಭದಲ್ಲಿ ಪಕ್ಷ ರಾಜಕಾರಣ ಮಾತನಾಡುವವರನ್ನ ದೇವರೇ ಕಾಪಾಡಲಿ ಎಂದು ಹೇಳಿದರು.