ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು: ಇಂದು ಹೊಸದಾಗಿ 162 ಕೊರೊನಾ ಪ್ರಕರಣ ಪತ್ತೆ - ಜಿಲ್ಲಾ ಕೋವಿಡ್ -19 ಆಸ್ಪತ್ರೆ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು 162 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇಂದು ಜಿಲ್ಲಾ ಕೋವಿಡ್ -19 ಆಸ್ಪತ್ರೆಯಿಂದ 289 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ.

hospital
hospital

By

Published : Oct 12, 2020, 10:12 PM IST

ಚಿಕ್ಕಮಗಳೂರು:ಜಿಲ್ಲೆಯಲ್ಲಿ ಇಂದು 162 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 10,744ಕ್ಕೆ ಏರಿಕೆಯಾಗಿದೆ.

ಇಂದು ಜಿಲ್ಲಾ ಕೋವಿಡ್ -19 ಆಸ್ಪತ್ರೆಯಿಂದ 289 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೂ ಜಿಲ್ಲೆಯಲ್ಲಿ ಒಟ್ಟು 8,939 ಜನ ಸೋಂಕಿತರು ಜಿಲ್ಲಾ ಕೋವೀಡ್ -19 ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಚಿಕ್ಕಮಗಳೂರು ತಾಲೂಕಿನಲ್ಲಿ 36, ಕಡೂರು ತಾಲೂಕಿನಲ್ಲಿ 18, ಮೂಡಿಗೆರೆ ತಾಲೂಕಿನಲ್ಲಿ 45, ತರೀಕೆರೆ ತಾಲೂಕಿನಲ್ಲಿ 15, ಶೃಂಗೇರಿ ತಾಲೂಕಿನಲ್ಲಿ 02, ಕೊಪ್ಪ ತಾಲೂಕಿನಲ್ಲಿ 18, ಎನ್ಆರ್ ಪುರ ತಾಲೂಕಿನಲ್ಲಿ 28 ಪ್ರಕರಣಗಳು ಪತ್ತೆಯಾಗಿದೆ.

ಇಂದು ಕೊರೊನಾಗೆ ಇಬ್ಬರು ಬಲಿಯಾಗಿದ್ದು, ಈವರೆಗೂ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 133ಕ್ಕೆ ಏರಿಕೆಯಾಗಿದೆ. ಇಂದು ಪತ್ತೆಯಾದ ಸೋಂಕಿತರು ವಾಸ ಮಾಡುತ್ತಿದ್ದ ಮನೆಯನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಸಂಪೂರ್ಣ ಸೀಲ್​ಡೌನ್ ಮಾಡಿ ಕಟ್ಟೆಚ್ಚರ ವಹಿಸಿದೆ.

ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10,744ಕ್ಕೆ ಏರಿಕೆಯಾಗಿದ್ದು, ಒಟ್ಟು 1,383 ಸಕ್ರಿಯ ಪ್ರಕರಣಗಳಿವೆ.

ABOUT THE AUTHOR

...view details