ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಈ ಮಹಾಮಳೆಗೆ ಭಾರೀ ಗಾತ್ರದ ಹೆಬ್ಬಾವು ತೇಲಿಕೊಂಡು ಬಂದಿರುವ ಘಟನೆ ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಅಂಡುವಾನೆ ಗ್ರಾಮದ ಬಳಿ ನಡೆದಿದೆ.
ಮಳೆಯ ನೀರಿನಲ್ಲಿ ತೇಲಿ ಬಂದ ಹೆಬ್ಬಾವು: ಸ್ಥಳೀಯರಿಂದ ರಕ್ಷಣೆ - ಮಳೆಯ ನೀರಿನಲ್ಲಿ ತೇಲಿಕೊಂಡು ಬಂದ ಹೆಬ್ಬಾವು
ಮಳೆಯ ನೀರಿನಲ್ಲಿ ಭಾರೀ ಗಾತ್ರದ ಹೆಬ್ಬಾವು ತೇಲಿಕೊಂಡು ಬಂದು, ನಿತ್ರಾಣಗೊಂಡಿರುವ ಘಟನೆ ಎನ್ ಆರ್ ಪುರ ತಾಲೂಕಿನ ಅಂಡುವಾನೆ ಗ್ರಾಮದ ಬಳಿ ನಡೆದಿದೆ.
ಮಳೆಯ ನೀರಿನಲ್ಲಿ ತೇಲಿಕೊಂಡು ಬಂದ ಹೆಬ್ಬಾವು: ಸ್ಥಳೀಯರಿಂದ ರಕ್ಷಣೆ
ಹೆಬ್ಬಾವಿನ ಸ್ಥಿತಿ ಕಂಡು ಪ್ರಾಣಿಪ್ರಿಯರು ಮರುಕಪಟ್ಟಿದ್ದು, ಕೂಡಲೇ ಅದನ್ನು ನೀರಿನಿಂದ ತೆಗೆದು ರಕ್ಷಿಸಿದ್ದಾರೆ. ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆ ವನ್ಯ ಜೀವಿಗಳಿಗೂ ಕಂಟಕವಾಗಿದೆ. ಮೂಡಿಗೆರೆ ತಾಲೂಕಿನ ಕುದುರೆಮುಖದಲ್ಲಿಯೂ ಭಾರೀ ಮಳೆಯಾಗುತ್ತಿದ್ದು, ಭದ್ರೆಯ ಒಡಲಿಗೆ ಸಿಲುಕಿ ಪ್ರಾಣಿಗಳು ಪರಾದಾಡುತ್ತಿವೆ.
ಮಹಾ ಮಳೆಯಿಂದ ಕುದುರೆ ಮುಖದ ವನ್ಯ ಜೀವಿಗಳಿಗೂ ಕಂಠಕವಾಗಿದೆ. ಅಲ್ಲದೇ ಕಡವೆಯ ಮೃತದೇಹ ಭದ್ರಾ ನದಿಯಲ್ಲಿ ತೇಲಿ ಬಂದಿದ್ದು, ಕಳಸದ ಕೋಟೆ ಹೊಳೆ ಸಮೀಪ ಇದು ಪತ್ತೆಯಾಗಿದೆ.