ಚಿಕ್ಕಮಗಳೂರು: ಕಾಫಿನಾಡಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿದೆ. ಪ್ರಿಯಕರನ ಜೊತೆ ಸೇರಿ ತನ್ನ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದ ಯುವತಿ ಮತ್ತು ಆಕೆಯ ಲವರ್ ಈಗ ಅಂದರ್ ಆಗಿದ್ದಾರೆ. ಆಭರಣ ಸಹಿತ ಇಬ್ಬರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಯುವತಿ ಶಮಂತಕ ಮಣಿ, ಪ್ರಿಯಕರ ಭರತ್ ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ.
ಜಿಲ್ಲೆಯ ಬೀರೂರು ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಬೋಕಿಕೆರೆ ಗ್ರಾಮದ ರಾಜೇಶ್ ಎಂಬುವರ ಪತ್ನಿ ಶಮಂತಕ ಮಣಿ ಹಾಗೂ ಅವರ ತಾಯಿ ಶಾರದಮ್ಮ ಮನೆಗೆ ಬೀಗ ಹಾಕಿಕೊಂಡು ಜಮೀನಿಗೆ ಹೋಗಿದ್ದರು. ಆ ಸಮಯದಲ್ಲಿ ರಾಜೇಶ್ರವರ ಮನೆಯ ಬೀಗವನ್ನು ಒಡೆದು ಒಳ ನುಗ್ಗಿದ ಅನಾಮಿಕರು ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾರೆ.