ಚಿಕ್ಕಮಗಳೂರು:ನಾವು ಆಜಾನ್ ಪರ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಶಾಸಕ ಸಿ.ಟಿ.ರವಿ ಚಿಕ್ಕಮಗಳೂರಿನಲ್ಲಿ ಕಿಡಿಕಾರಿದ್ದಾರೆ. ಅವರು ಕೋರ್ಟ್ ತೀರ್ಪಿಗಿಂತ ಮತ ಬ್ಯಾಂಕ್ ರಾಜಕಾರಣ ಅನ್ನೋದನ್ನು ತೋರಿಸೊದ್ದಾರೆ. ಇದು ಮತೀಯ ವಾದದ ಓಲೈಕೆ ಅಲ್ಲದೇ ಮತ್ತೇನೂ ಅಲ್ಲ ಎಂದರು.
ಚಿಕ್ಕಮಗಳೂರು: ಮಲ್ಲಿಕಾರ್ಜುನ ಖರ್ಗೆ ವಿರುದ್ಧ, ಸಿ ಟಿ ರವಿ ವಾಗ್ದಾಳಿ - ಭಾರತವನ್ನು ಒಡೆದದ್ದು ಕಾಂಗ್ರೆಸ್ನವರ ಮುಸ್ಲಿಂ ಓಲೈಕೆ ನೀತಿ
ಭಾರತವನ್ನು ಒಡೆದದ್ದು ಕಾಂಗ್ರೆಸ್ನವರ ಮುಸ್ಲಿಂ ಓಲೈಕೆ ನೀತಿಯಿಂದಾಗಿನೇ ಎಂದು ಸಿ.ಟಿ ರವಿ ಅವರು ಖರ್ಗೆ ಅವರ ಆಜಾನ್ ಕುರಿತಾದ ಹೇಳಿಕೆ ಪ್ರತಿಕ್ರಿಯಿಸುವಾಗ ತಿರುಗೇಟು ನೀಡಿದ್ದಾರೆ.
ಶಾಸಕ ಸಿ.ಟಿ.ರವಿ
ಯಾವ ಸಮಯದಲ್ಲಿ ಎಷ್ಟು ಡೆಸಿಬಲ್ ಇರಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ. ಇವರು ನಾವು ಮುಸ್ಲಿಂ ಪರ, ಹಿಂದೂಗಳ ಪರ ಇಲ್ಲ ಎಂಬ ಸಂದೇಶ ನೀಡಿದ್ದಾರೆ. ಕಾಂಗ್ರೆಸ್ ಯಾವತ್ತೂ ಹಿಂದೂಗಳ ಪರ ಇಲ್ಲ. ಅವರು ಮುಸ್ಲಿಂ ಇದ್ದಿದ್ದಕ್ಕೆ ದೇಶ ವಿಭಜನೆ ಆಗಿದ್ದು. ಮತೀಯ ವಾದದ ಓಲೈಕೆ ನೀತಿಯನ್ನ ಕಾಂಗ್ರೆಸ್ ತೋರಿಸುತ್ತಿದೆ. ಅವರಿಗೆ ಅಂಬೇಡ್ಕರ್ ಹೆಸರೇಳುವ ನೈತಿಕತೆಯೂ ಇಲ್ಲ ಎಂದು ದೂರಿದರು.