ಚಿಕ್ಕಮಗಳೂರು: ನಗರದ ಕೆಂಪನಹಳ್ಳಿ ಕನಕ ಯುವಕರ ತಂಡದ ವತಿಯಿಂದ ಜೋಡೆತ್ತಿನ ಸ್ಪರ್ಧೆ ಆಯೋಜಿಸಿದ್ದು, ಚಿಕ್ಕಮಗಳೂರು, ಮಂಡ್ಯ, ಹಾಸನ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ 36 ಜೋಡಿ ಎತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಿದವು.
ಚಿಕ್ಕಮಗಳೂರು ನಗರದ ಹೊರವಲದಲ್ಲಿ ನಡೆದ ಜೋಡೆತ್ತಿನ ಸ್ಪರ್ಧೆ ಚಿಕ್ಕಮಗಳೂರು ನಗರದ ಹೊರ ವಲಯದಲ್ಲಿರುವ ಬಾಳೆಹಳ್ಳಿಯಲ್ಲಿ ಕೆಂಪನಹಳ್ಳಿ ಕನಕ ಯುವಕ ಸಂಘದ ವತಿಯಿಂದ ಈ ಸ್ಪರ್ಧೆ ಆಯೋಜಿಸಲಾಗಿದ್ದು, ಸ್ಪರ್ಧೆ ನೋಡಲು ಜನ ಮುಗಿಬಿದ್ದ ದೃಶ್ಯ ಕಂಡು ಬಂದಿತು.
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುಗ್ಗಿ ಹಬ್ಬದ ಸಂಭ್ರಮ ಮುಗಿಯುತ್ತಿದ್ದಂತೆ ರಾಸುಗಳ ಓಟದ ಹಬ್ಬ ಆಯೋಜಿಸಲಾಗುತ್ತದೆ. ರಾಜ್ಯದ ಮೂಲೆ ಮೂಲೆಗಳಿಂದ ಬಂದು ಯುದ್ಧಕ್ಕೆ ಸನ್ನದ್ಧರಾದ ಸೈನಿಕರಂತಿದ್ದ ಎತ್ತುಗಳು ನೋಡುಗರ ಮನಸೆಳೆದು, ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಿಸುತ್ತವೆ.
ಅಷ್ಟೇ ಅಲ್ಲ, ಚಿಕ್ಕಮಗಳೂರು ಜೋಡೆತ್ತಿನ ಸ್ಪರ್ಧೆ ಆಯೋಜನೆ ಮಾಡುವುದರಲ್ಲಿ ಮುಂಚೂಣಿಯಲ್ಲಿದ್ದು, ಕಳೆದ ಕೆಲ ದಿನಗಳ ಹಿಂದೆ ತೇಗೂರಿನಲ್ಲಿ ನಡೆದ ಜೋಡೆತ್ತು ಸ್ಪರ್ಧೆ ಕೂಡ ರೋಮಾಂಚನದಿಂದ ಕೂಡಿತ್ತು.