ಚಿಕ್ಕಮಗಳೂರು:ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯಿಂದ ಸಂತ್ರಸ್ತರಾದವರಿಗೆ ಅವದೂತ ವಿನಯ್ ಗೂರುಜಿ ಹಾಗೂ ಭಕ್ತರು ಆಹಾರ ಪದಾರ್ಥಗಳ ಕಿಟ್ ವಿತರಿಸಿದರು.
ಚಿಕ್ಕಮಗಳೂರು: ಮಳೆ ಸಂತ್ರಸ್ತರಿಗೆ ವಿನಯ್ ಗುರೂಜಿ ಭಕ್ತರಿಂದ ಅಗತ್ಯ ವಸ್ತುಗಳ ನೆರವು - Malnad News
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಹಾನಿಯಿಂದ ಮನೆ ಆಸ್ತಿ-ಪಾಸ್ತಿ ನಷ್ಟ ಹೊಂದಿ ಸಂತ್ರಸ್ತರಾದವರಿಗೆ ವಿನಯ್ ಗುರೂಜಿ ಭಕ್ತರು ಅಗತ್ಯ ವಸ್ತುಗಳ ನೆರವು ನೀಡಿದರು. ಸಂತ್ರಸ್ತರ ಮನೆ ಬಾಗಿಲಿಗೆ ತೆರಳಿ ಆಹಾರ ಪದಾರ್ಥಗಳು ಸೇರಿದಂತೆ ಇತರ ಅಗತ್ಯ ಸಾಮಗ್ರಿಗಳ ಪರಿಹಾರ ಕಿಟ್ಗಳನ್ನು ವಿತರಿಸಿದರು.
ಬೆಂಗಳೂರಿನ ಕಸ್ತೂರ ಬಾ ಚಾರಿಟೇಬಲ್ ಟ್ರಸ್ಟ್ ಹಾಗೂ ಗೌರಿ ಗದ್ದೆ ವಿನಯ ಗೂರುಜಿ ಆಶ್ರಮದಿಂದ ಸುಮಾರು ಒಂದು ಲಾರಿಯಷ್ಟು ಆಹಾರ ಪದಾರ್ಥಗಳಾದ ಅಕ್ಕಿ, ಬೇಳೆ ಸೇರಿದಂತೆ ಒಂದು ತಿಂಗಳ ದಿನಸಿ ಸಾಮಗ್ರಿಗಳನ್ನು ಜಿಲ್ಲೆಯಲ್ಲಿರುವ ಭಕ್ತಾದಿಗಳು ಹಾಗೂ ಸಂತ್ರಸ್ತರ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ವಿತರಣೆ ಮಾಡಿದರು.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಮರಸಣಿಗೆ, ಯಡಿಯೂರು, ಇಡಕಣಿ, ಬಲಿಗೆ ಹಾಗೂ ಎನ್.ಆರ್. ಪುರ ತಾಲೂಕಿನ ಮಾಗುಂಡಿ, ಬಾಳೆಹೊನ್ನೂರು ಭಾಗದಲ್ಲಿ ಪ್ರವಾಹಕ್ಕೆ ಒಳಗಾದ ಸಂತ್ರಸ್ತರ ಮನೆಗಳಿಗೆ ವಿನಯ್ ಗುರೂಜಿ ಹಾಗೂ ಭಕ್ತರು ಪರಿಹಾರ ಸಾಮಗ್ರಿಗಳನ್ನ ನೀಡಿದರು. ಮನೆಗೆ ಬೇಕಾದ ಆಹಾರ ಪದಾರ್ಥಗಳಾದ ಅಕ್ಕಿ, ಸೋಪು, ಅಡುಗೆ ಎಣ್ಣೆ, ಬಟ್ಟೆ, ಪೇಸ್ಟ್, ಸೀರೆ, ಮಕ್ಕಳಿಗೆ ಅಂಗಿ, ಸೇರಿದಂತೆ ಅಗತ್ಯ ಸಾಮಗ್ರಿಗಳ ಕಿಟ್ ವಿತರಣೆ ಮಾಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದ್ರು.