ಚಿಕ್ಕಮಗಳೂರು:ಜಿಲ್ಲೆಯಲ್ಲಿ ವಾರದಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಹಳ್ಳ ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಜಿಲ್ಲೆಯ ಕಳಸ ತಾಲೂಕಿನ ಗುಳ್ಯ ಗ್ರಾಮದಕ್ಕೆ ಸಂಪರ್ಕ ಕಲ್ಪಿಸಲು ಸರಿಯಾದ ಸೇತುವೆ ಇಲ್ಲದೇ ಜನ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮಸ್ಥರೇ ನಿರ್ಮಿಸಿರುವ ಕಾಲು ಸೇತುವೆ ಈಗ ಗ್ರಾಮಸ್ಥರ ಆಸರೆ ಆಗಿದೆ.
ಚಿಕ್ಕಮಗಳೂರು: ಕೊಚ್ಚಿ ಹೋಗುವ ಸ್ಥಿತಿಯಲ್ಲಿ ಕಾಲು ಸಂಕ - ಶಾಶ್ವತ ಸೇತುವೆಗಾಗಿ ಮನವಿ
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಗುಳ್ಯ ಗ್ರಾಮದಕ್ಕೆ ಸಂಪರ್ಕ ಕಲ್ಪಿಸಲು ಶಾಶ್ವತ ಸೇತುವೆಗಾಗಿ ಗ್ರಾಮಸ್ಥರು ಬಹಳಾ ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಾ ಬಂದಿದ್ದಾರೆ, ಆದರೆ ಇನ್ನು ಸೇತುವೆ ನಿರ್ಮಾಣವಾಗದೇ ಜನರು ಸಮಸ್ಯೆಯಲ್ಲೇ ಜೀವನ ದೂಡುತ್ತಿದ್ದಾರೆ.
ಕೊಚ್ಚಿ ಹೋಗುವ ಸ್ಥಿತಿಯಲ್ಲಿ ಕಾಲು ಸಂಕ
ಮಳೆ ಜೋರು ಬಂದಲ್ಲಿ ಆ ಕಾಲು ಸಂಕವೂ ಕೊಚ್ಚಿ ಹೋಗುವ ಭೀತಿ ಇದೆ. ದಿನೆದಿನೇ ಏರಿಕೆಯಾಗುತ್ತಿರುವ ಮಳೆಯಿಂದ ಸಂಕಕ್ಕೆ ಹಾನಿಯಾದಲ್ಲಿ ಗ್ರಾಮದ ಸಂಪರ್ಕ ಕಡಿದು ಹೋಗಲಿದೆ, ಇದರಿಂದ ಶಾಲಾ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರಿಗೆ ಬಹಳ ಸಮಸ್ಯೆ ಆಗಲಿದೆ. ಶಾಶ್ವತ ಸೇತುವೆಗಾಗಿ ಗ್ರಾಮಸ್ಥರು ಬಹಳಾ ವರ್ಷಗಳಿಂದ ಸರ್ಕಾರಕ್ಕೆ ಬೇಡಿಕೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ :ಭಾರಿ ಮಳೆಗೆ ತುಂಬಿ ಹರಿಯುತ್ತಿರುವ ಕುಮಾರಧಾರ ನದಿ : ಹಲವೆಡೆ ರಸ್ತೆ ಸಂಪರ್ಕ ಕಡಿತ