ಚಿಕ್ಕಮಗಳೂರು:ಜಿಲ್ಲೆಯ ಕಡೂರು ತಾಲೂಕಿನ ಮಲ್ಲೇಶ್ವರ ನಗರದ ಸ್ವರ್ಣಾಂಬೆ ದೇವಿಯ ತೆಪ್ಪೋತ್ಸವವು ಅದ್ಧೂರಿಯಾಗಿ ನಡೆಯಿತು. ಸ್ವರ್ಣ ಪುಷ್ಕರಣಿಯಲ್ಲಿ ಸಂಭ್ರಮದಿಂದ ತೆಪ್ಪೋತ್ಸವ ನೆರವೇರಿತು.
ಕಡೂರಲ್ಲಿ ಸ್ವರ್ಣಾಂಬೆ ದೇವಿಯ ಅದ್ಧೂರಿ ತೆಪ್ಪೋತ್ಸವ - undefined
ಕಡೂರು ತಾಲೂಕಿನ ಮಲ್ಲೇಶ್ವರ ನಗರದ ಸ್ವರ್ಣಾಂಬೆ ದೇವಿಯ ತೆಪ್ಪೋತ್ಸವವು ಸ್ವರ್ಣ ಪುಷ್ಕರಣಿಯಲ್ಲಿ ಅದ್ಧೂರಿಯಾಗಿ ನಡೆಯಿತು.
![ಕಡೂರಲ್ಲಿ ಸ್ವರ್ಣಾಂಬೆ ದೇವಿಯ ಅದ್ಧೂರಿ ತೆಪ್ಪೋತ್ಸವ](https://etvbharatimages.akamaized.net/etvbharat/images/768-512-3089336-thumbnail-3x2-teppotsava.jpg)
ತೆಪ್ಪೋತ್ಸವ
ಸ್ವರ್ಣಾಂಬೆ ದೇವಿಯ ತೆಪ್ಪೋತ್ಸವ
ಸ್ವರ್ಣಾಂಬೆ, ಅರಳೀಮರದಮ್ಮ ಮತ್ತು ಕರಿಯಮ್ಮ ದೇವಿಯವರನ್ನು ಅಲಂಕೃತ ತೆಪ್ಪದಲ್ಲಿ ಪ್ರತಿಷ್ಠಾಪಿಸಿ ಉತ್ಸವ ನಡೆಸಲಾಯಿತು. ಮಲ್ಲೇಶ್ವರದ ಗ್ರಾಮಸ್ಥರು ಪುಷ್ಕರಣಿಯಲ್ಲಿ ಇಳಿದು ತೆಪ್ಪವನ್ನು ಉತ್ಸಾಹದಿಂದ ಎಳೆದರು. ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮ, ಅಷ್ಟಾವಧಾನ ಸೇವೆಗಳ ನಂತರ ಶ್ರೀ ದೇವಿಯರ ಆಶೀರ್ವಾದ ಸ್ವೀಕಾರ ಮತ್ತು ಊರಿನ ಆಲಯ ಪ್ರವೇಶ ನಡೆಯಿತು.
ಕಡೂರು ತಾಲೂಕಿನ ಮಲ್ಲೇಶ್ವರದಲ್ಲಿ ಒಂದು ವಾರ ಕಾಲ ನಡೆದ ಜಾತ್ರಾ ಮಹೋತ್ಸವದಲ್ಲಿ ವಿವಿಧ ಕಾರ್ಯಕ್ರಮಗಳು ಹಾಗೂ ವಿಶೇಷ ಪೂಜೆ ಪುನಸ್ಕಾರಗಳು ಜರುಗಿದವು. ನಂತರ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ತೆಪ್ಪೋತ್ಸವದೊಂದಿಗೆ ಜಾತ್ರೆ ಮುಕ್ತಾಯವಾಯಿತು.