ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿಯಲ್ಲಿರುವ ಶಾರದಾಂಬಾ ದೇವಸ್ಥಾನದಲ್ಲಿ ಇಂದಿನಿಂದ ದೇವರ ದರ್ಶನಕ್ಕೆ ಆಡಳಿತ ಮಂಡಳಿ ಭಕ್ತರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಬೆಳಗ್ಗೆ 6ರಿಂದಲೇ ದೇವಸ್ಥಾನ ತೆರೆಯಲಿದ್ದು, ಜಗದ್ಗುರುಗಳ ಭೇಟಿಗೆ ಕೂಡಾ ಅವಕಾಶ ಮಾಡಿಕೊಡಲಾಗಿದೆ.
ಶಾರಂದಾಂಬೆಯ ದರ್ಶನಕ್ಕೆ ಇಂದಿನಿಂದ ಅವಕಾಶ, ಆಧಾರ್ ಕಾರ್ಡ್ ಅಗತ್ಯ..! - ಲಾಕ್ಡೌನ್
ಇಂದಿನಿಂದ ದೇವರ ದರ್ಶನಕ್ಕೆ ಆಡಳಿತ ಮಂಡಳಿ ಭಕ್ತರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಬೆಳಗ್ಗೆ 6ರಿಂದಲೇ ದೇವಸ್ಥಾನ ತೆರೆಯಲಿದ್ದು, ಜಗದ್ಗುರುಗಳ ಭೇಟಿಗೆ ಕೂಡಾ ಅವಕಾಶ ಮಾಡಿಕೊಡಲಾಗಿದೆ
![ಶಾರಂದಾಂಬೆಯ ದರ್ಶನಕ್ಕೆ ಇಂದಿನಿಂದ ಅವಕಾಶ, ಆಧಾರ್ ಕಾರ್ಡ್ ಅಗತ್ಯ..! shringeri temple](https://etvbharatimages.akamaized.net/etvbharat/prod-images/768-512-7521444-thumbnail-3x2-raa.jpg)
ದೇವಸ್ಥಾನಕ್ಕೆ ಬರುವ ಭಕ್ತರಿಗೆ ಆಡಳಿತ ಮಂಡಳಿ ಹಲವಾರು ಷರತ್ತುಗಳನ್ನು ವಿಧಿಸಿದ್ದು, ಈ ಎಲ್ಲ ಷರತ್ತುಗಳನ್ನು ಪಾಲಿಸಿದರೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ದೊರೆಯಲಿದೆ. ಬೆಳಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ, ಸಂಜೆ 5ರಿಂದ ರಾತ್ರಿ 8ರವರೆಗೆ ದೇವಸ್ಥಾನ ತೆರೆದಿರಲಿದ್ದು, ಎಲ್ಲರೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕಿದೆ. ಥರ್ಮಲ್ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿದೆ.
ಆಡಳಿತ ಮಂಡಳಿಯ ಮುಂದಿನ ತೀರ್ಮಾನದವರೆಗೂ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ ನಡೆಯೋದಿಲ್ಲ. ದೇವಸ್ಥಾನಕ್ಕೆ ಬರುವ ಎಲ್ಲ ಭಕ್ತರಿಗೆ ಆಧಾರ್ ಕಾರ್ಡ್ ಕಡ್ಡಾಯ ಎಂದೂ ದೇವಸ್ಥಾನದ ಆಡಳಿತ ಮಂಡಳಿ ಷರತ್ತು ವಿಧಿಸಿದ್ದು, ಈ ಎಲ್ಲ ಷರತ್ತುಗಳನ್ನು ಪಾಲಿಸಿದರೆ ಮಾತ್ರ ದೇವರ ದರ್ಶನ ಹಾಗೂ ಜಗದ್ಗುರುಗಳ ದರ್ಶನ ಸಿಗಲಿದೆ.