ಚಿಕ್ಕಮಗಳೂರು: ಮೂಡಿಗೆರೆಯ ಜೂನಿಯರ್ ಕಾಲೇಜಿನ ಹೈಸ್ಕೂಲ್‌ನಲ್ಲಿ ವಿದ್ಯಾರ್ಥಿನಿಯ ತಲೆಗೆ ಹೆಂಚು ಬಿದ್ದಿದ್ದು, ಗಾಯಗೊಂಡಿದ್ದಾಳೆ. ಚಿಕ್ಕಮಗಳೂರು ತಾಲೂಕಿನ ತುಂಬಳ್ಳಿಪುರ ಗ್ರಾಮದಲ್ಲಿ ಅಣ್ಣಪ್ಪ ಶೆಟ್ಟಿ ಎಂಬುವರಿಗೆ ಸೇರಿದ ಒಂದು ಎಕರೆ ಕಾಫಿ ತೋಟ ಮಳೆ ನೀರಿಗೆ ಹಾನಿಗೊಳಗಾಗಿದೆ. ಅಲ್ಲಲ್ಲಿ ಗುಡ್ಡವೂ ಜರಿದಿದೆ. ಮೆಣಸು, ಅಡಿಕೆ, ಕಾಫಿ, ಬಾಳೆ ಸಂಪೂರ್ಣ ನಾಶವಾಗಿದ್ದು ಸ್ಥಳಕ್ಕೆ ಅಧಿಕಾರಿಗಳು ಬರುವಂತೆ ರೈತರು ಒತ್ತಾಯಿಸಿದ್ದಾರೆ.
ಚಿಕ್ಕಮಗಳೂರು: ಭಾರಿ ಮಳೆಗೆ ವಿದ್ಯಾರ್ಥಿನಿ ತಲೆ ಮೇಲೆ ಬಿದ್ದ ಶಾಲೆಯ ಹೆಂಚು - state rain situation
ಚಿಕ್ಕಮಗಳೂರಿನಲ್ಲಿ ಜೋರು ಮಳೆ ಸುರಿಯುತ್ತಿದ್ದು ಸಾಕಷ್ಟು ಅವಾಂತರಗಳು ಉಂಟಾಗುತ್ತಿದೆ.
ಚಿಕ್ಕಮಗಳೂರಿನಲ್ಲಿ ಮಳೆ ಅವಾಂತರ
ಶೃಂಗೇರಿ ತಾಲೂಕಿನ ಉಳುಮೆ ಗ್ರಾಮದ ಬಳಿ ಕೊಪ್ಪ-ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಬಿರುಕು ಕಂಡುಬಂದಿದೆ. ಹೆದ್ದಾರಿಯಲ್ಲಿ ಕೆಂಪು ಪಟ್ಟಿ ಅಳವಡಿಸಿ ವಾಹನ ಸವಾರರಿಗೆ ಎಚ್ಚರಿಕೆ ನೀಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ 173, ಮೂಡಿಗೆರೆಯ ಬಿಳಗುಳ ಸಮೀಪ ರಸ್ತೆ ಮೇಲೆ ಮರ ಉರುಳಿದೆ. ಹೀಗಾಗಿ ಹೆದ್ದಾರಿಯಲ್ಲಿ ಕೆಲ ಹೊತ್ತು ಕಿಲೋಮೀಟರ್ ಅಂತರದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಇದನ್ನೂ ಓದಿ:ಚಿಕ್ಕಮಗಳೂರು: ಮನೆ ಮೇಲೆ ಬೃಹತ್ ಮರ ಬಿದ್ದುಇಬ್ಬರು ಮಹಿಳೆಯರ ಸಾವು