ಕರ್ನಾಟಕ

karnataka

ETV Bharat / state

ಚುನಾವಣಾ ಪ್ರಚಾರದ ವೇಳೆ ಎ.ಮಂಜು ವಿರುದ್ಧ ಪ್ರಜ್ವಲ್​​ ರೇವಣ್ಣ ವಾಗ್ದಾಳಿ - ಬಿಜೆಪಿ ಅಭ್ಯರ್ಥಿ ಎ ಮಂಜು

ಅಂದು ಸಿದ್ರಾಮಣ್ಣನವವರು, ಇಂದು ಯಡಿಯೂರಪ್ಪನವರು, ನಾಳೆ ಎ.ಮಂಜು ನಿಮ್ಮ ಮನೆಗೆ ಬಂದ್ರು ಆಶ್ಚರ್ಯವಿಲ್ಲ. ಲಜ್ಜೆಗೆಟ್ಟ ರಾಜಕಾರಣ ಮಾಡ್ತಿದ್ದಾರೆ ಎಂದು ಅರಕಲಗೂಡು ಜನರೇ ಹೇಳುತ್ತಿದ್ದಾರೆ ಎಂದು ಪ್ರಜ್ವಲ್ ರೇವಣ್ಣ ಎ.ಮಂಜು ವಿರುದ್ಧ ವಾಗ್ದಾಳಿ ನಡೆಸಿದರು.

ಎ ಮಂಜು ವಿರುದ್ಧ ಪ್ರಜ್ವಲ್ ರೇವಣ್ಣ ವಾಗ್ದಾಳಿ

By

Published : Apr 9, 2019, 4:36 PM IST

ಚಿಕ್ಕಮಗಳೂರು: ಕಡೂರು ತಾಲೂಕಿನಲ್ಲಿ ಹಾಸನ ಲೋಕಸಭಾ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಚುನಾವಣಾ ಪ್ರಚಾರ ಮಾಡುವ ವೇಳೆ ಬಿಜೆಪಿ ಅಭ್ಯರ್ಥಿ ಎ.ಮಂಜು ವಿರುದ್ಧ ವಾಗ್ದಾಳಿ ನಡೆಸಿದರು.

ಅಂದು ಸಿದ್ರಾಮಣ್ಣನವವರು, ಇಂದು ಯಡಿಯೂರಪ್ಪನವರು, ನಾಳೆ ಎ.ಮಂಜು ನಿಮ್ಮ ಮನೆಗೆ ಬಂದ್ರು ಆಶ್ಚರ್ಯವಿಲ್ಲ. ಅಂತಹ ಲಜ್ಜೆಗೆಟ್ಟ ರಾಜಕಾರಣ ಮಾಡ್ತಿದ್ದಾರೆ ಎಂದು ಅರಕಲಗೂಡು ಜನರೇ ಹೇಳುತ್ತಿದ್ದಾರೆ ಎಂದು ಎ.ಮಂಜು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಎ ಮಂಜು ವಿರುದ್ಧ ಪ್ರಜ್ವಲ್ ರೇವಣ್ಣ ವಾಗ್ದಾಳಿ

ಹಾಸನ ಲೋಕಸಭಾ ಕ್ಷೇತ್ರದ ಕಡೂರಿನಲ್ಲಿ ಮಾತನಾಡಿದ ಅವರು, ಒಂಭತ್ತು ತಿಂಗಳಲ್ಲೇ ಸೋಲನ್ನ ಅನುಭವಿಸಿರೋ ಎ.ಮಂಜು ಅವರು ಅಧಿಕಾರವಿಲ್ಲದೆ ನೀರಿನಿಂದ ತೆಗೆದ ಮೀನಿನಂತಾಗಿ, ಅಧಿಕಾರ ಹಾಗೂ ಹಣಕ್ಕಾಗಿ ಬಿಜೆಪಿ ಸೇರಿದ್ದಾರೆ. ಮೇ 23ಕ್ಕೆ ಅವರು ಮತ್ತೆ ಮನೆಗೆ ಹೋಗುವಂತ ಕೆಲಸವಾಗುತ್ತೆ. ಆಗ ಅವರು ಮತ್ತೆ ಬಿಎಸ್‍ವೈ ಬಿಟ್ಟು ಬೇರೆ ಪಕ್ಷ ನೋಡ್ತಾರೆ ಎಂದರು. ಇನ್ನು ಸದಾ ಅಭಿವೃದ್ಧಿ ರಾಜಕಾರಣಕ್ಕೆ ಹೆಸರಾಗಿರೋ ಹಾಸನ ಲೋಕಸಭಾ ಕ್ಷೇತ್ರದಲ್ಲೀಗ ಜಾತಿ ರಾಜಕಾರಣವೂ ಆರಂಭವಾಗಿದೆ.

ಎ.ಮಂಜು ಅವರು ಎಷ್ಟು ವೀರಶೈವ ನಾಯಕರನ್ನ ಗೆಲ್ಲಿಸಿದ್ದಾರೆ? ನಮಗೆ ವೀರಶೈವರ ಮೇಲೆ ಪ್ರೀತಿ ಇಲ್ಲವೆ? ಪ್ರೀತಿ ಇಲ್ಲದೆ ಬೇಲೂರಿನಲ್ಲಿ ಕ್ಷೇತ್ರ ತ್ಯಾಗ ಮಾಡಿ ಲಿಂಗೇಶ್‍ರನ್ನ ಗೆಲ್ಲಿಸಿದ್ವಾ ಎಂದು ಕಿಡಿಕಾರಿದರು. ಜೀವನ ಪೂರ್ತಿ ವೀರಶೈವರನ್ನ ತುಳಿದೋರು ಈಗ ಬಿಜೆಪಿ ಸೇರಿದ್ದೇನೆಂದು ಯಾವ ನೈತಿಕತೆ ಇಟ್ಕೊಂಡು ವೀರಶೈವ ಮತ ಕೇಳ್ತಿದ್ದಾರೋ ನನಗೆ ಗೊತ್ತಿಲ್ಲ ಎಂದು ಎ. ಮಂಜು ವಿರುದ್ಧ ಕಿಡಿಕಾರಿದರು.

ABOUT THE AUTHOR

...view details