ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು: ಹೃದಯಾಘಾತದಿಂದ ಪೊಲೀಸ್ ಕಾನ್ಸ್‌ಟೇಬಲ್‌ ಸಾವು - ಚಿಕ್ಕಮಗಳೂರಿನಲ್ಲಿ ಹೃದಯಾಘಾತದಿಂದ ಪೊಲೀಸ್ ಪೇದೆ ಸಾವು

ಕಳೆದ ಐದು ವರ್ಷಗಳಿಂದ ದಫೇದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಕೆ.ಬಿ. ಪರಮೇಶ್ವರಪ್ಪ ಎಂಬುವವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

Police constable died by an heart attack
ಹೃದಯಾಘಾತದಿಂದ ಪೊಲೀಸ್ ಪೇದೆ ಸಾವು

By

Published : Apr 11, 2022, 7:05 PM IST

ಚಿಕ್ಕಮಗಳೂರು:ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಹೃದಯಾಘಾತವಾಗಿ ಪೊಲೀಸ್ ಕಾನ್ಸ್‌ಟೇಬಲ್‌ ಸಾವಿಗೀಡಾಗಿದ್ದಾರೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ. ಕಳೆದ ಐದು ವರ್ಷಗಳಿಂದ ದಫೇದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಕೆ.ಬಿ. ಪರಮೇಶ್ವರಪ್ಪ ಮೃತಪಟ್ಟಿದ್ದಾರೆ.


ಕಳೆದ ರಾತ್ರಿ 10 ಗಂಟೆಯ ಸಮಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಬಳಿಕ ಅವರನ್ನು ಮೂಡಿಗೆರೆಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ. ಕೆ.ಬಿ.ಪರಮೇಶ್ವರಪ್ಪ ಅವರು ಚಿಕ್ಕಮಗಳೂರು ಜಿಲ್ಲೆಯ ಲಕ್ಯಾ ಹೋಬಳಿಯ ಕಣಿವೆ ಹಳ್ಳಿಯವರು. ಮೃತ ಕಾನ್ಸ್‌ಟೇಬಲ್‌ ಪತ್ನಿ ಲಕ್ಷ್ಮಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಇದನ್ನೂ ಓದಿ:ವಾಹನ ಅಪಘಾತ : ಸಂಸದ ಸಂಗಣ್ಣ ಕರಡಿ ಸಹೋದರ ಸ್ಥಳದಲ್ಲಿಯೇ ಸಾವು

For All Latest Updates

TAGGED:

ABOUT THE AUTHOR

...view details