ಚಿಕ್ಕಮಗಳೂರು: ಅಪ್ರಾಪ್ತೆ ಬಟ್ಟೆ ಬದಲಾಯಿಸುವುದನ್ನು ವಿಡಿಯೋ ಮಾಡಿಕೊಂಡು ಆಕೆಯನ್ನು ಬ್ಲಾಕ್ಮೇಲ್ ಮಾಡಿ, ಸುಮಾರು ಎರಡೂವರೆ ತಿಂಗಳು ಅತ್ಯಾಚಾರ ಮಾಡಿದ್ದ ವ್ಯಕ್ತಿ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಹಳ್ಳಿಯೊಂದರ ನಿವಾಸಿಯಾದ ಅನಿಲ್ ಎಂಬಾತ ಅದೇ ಗ್ರಾಮದ ಅಪ್ರಾಪ್ತೆ ಬಟ್ಟೆ ಬದಲಾಯಿಸಬೇಕಾದರೆ ಅದನ್ನು ವಿಡಿಯೋ ಮಾಡಿ, ಬೆದರಿಕೆ ಹಾಕಿದ್ದನು. ಬರದಿದ್ದರೆ, ಫೇಸ್ಬುಕ್, ವಾಟ್ಸ್ಆ್ಯಪ್ನಲ್ಲಿ ವಿಡಿಯೋ ಹಾಕಿ ಮನೆ ಮಾನ - ಮರ್ಯಾದೆ ಕಳೆಯುವುದಾಗಿ ಹೆದರಿಸಿದ್ದನು.
ಇದೇ ಗ್ರಾಮದ ಕಾರ್ತಿಕ್ ಎಂಬಾತನ ಮನೆಗೆ ಅಪ್ರಾಪ್ತೆಯನ್ನು ಕರೆಸಿಕೊಳ್ಳುತ್ತಿದ್ದ ಅನಿಲ್ ಸುಮಾರು ಎರಡು ತಿಂಗಳ ಕಾಲ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದರ ಜೊತೆಗೆ ಅತ್ಯಾಚಾರ ವಿಡಿಯೋ ಮಾಡಿಕೊಂಡು ತನ್ನ ಸ್ನೇಹಿತರಾದ ಬಾಲಾಜಿ ಹಾಗೂ ಅಖಿಲೇಶ್ಗೂ ತೋರಿಸಿದ್ದಾನೆ.