ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿರುವ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಲಘು ವಾಹನಗಳಿಗೆ ಸಂಪೂರ್ಣ ಮುಕ್ತ ಅವಕಾಶವನ್ನು ಇಂದಿನಿಂದ ಚಿಕ್ಕಮಗಳೂರು ಜಿಲ್ಲಾಡಳಿತ ಕಲ್ವಿಸಿಕೊಟ್ಟಿದೆ.
ಚಾರ್ಮಾಡಿ ಘಾಟಿಯಲ್ಲಿ ಲಘು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟ ಜಿಲ್ಲಾಡಳಿತ - ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಲಘು ವಾಹನಗಳಿಗೆ ಸಂಪೂರ್ಣ ಮುಕ್ತ
ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿರುವ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಲಘು ವಾಹನಗಳಿಗೆ ಸಂಪೂರ್ಣ ಮುಕ್ತ ಅವಕಾಶವನ್ನು ಇಂದಿನಿಂದ ಚಿಕ್ಕಮಗಳೂರು ಜಿಲ್ಲಾಡಳಿತ ಕಲ್ವಿಸಿಕೊಟ್ಟಿದೆ.

ಚಾರ್ಮಾಡಿ ಘಾಟಿ ಸವಾರರಿಗೆ ಸಿಹಿ ಸುದ್ದಿ: ಲಘು ವಾಹನ ಸಂಚಾರಕ್ಕೆ ಅನುವು ಮಾಡಿದ ಜಿಲ್ಲಾಡಳಿತ
ಚಾರ್ಮಾಡಿ ಘಾಟಿ ಸವಾರರಿಗೆ ಸಿಹಿ ಸುದ್ದಿ: ಲಘು ವಾಹನ ಸಂಚಾರಕ್ಕೆ ಅನುವು ಮಾಡಿದ ಜಿಲ್ಲಾಡಳಿತ
ಈ ಮಾರ್ಗದಲ್ಲಿ ದಿನದ 24 ಗಂಟೆಯೂ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಇಷ್ಟು ದಿನಗಳ ಕಾಲ ಬೆಳಗ್ಗೆ 6ರಿಂದ ಸಂಜೆ 6ರವರೆಗೂ ಮಾತ್ರ ಸಂಚಾರಕ್ಕೆ ಅವಕಾಶ ಇತ್ತು. ಸಂಚಾರಕ್ಕೆ ಅನುಮತಿ ಸಿಕ್ಕಿದ್ದು ಪ್ರಯಾಣಿಕರಿಗೆ ಸಂತೋಷದ ವಿಷಯವಾಗಿದೆ. ಆಗಸ್ಟ್ ತಿಂಗಳಿನಲ್ಲಿ ಸುರಿದ ಮಹಾ ಮಳೆಗೆ ಇಲ್ಲಿನ ಹಲವಾರು ಭಾಗಗಳಲ್ಲಿ ರಸ್ತೆಗೆ ಹಾನಿಯಾಗಿತ್ತು. ಬರೋಬ್ಬರಿ ಮೂರೂವರೇ ತಿಂಗಳ ಬಳಿಕ ಚಾರ್ಮಾಡಿ ಘಾಟಿ ರಸ್ತೆ ಸಂಪೂರ್ಣ ಸಂಚಾರಕ್ಕೆ ಸಿದ್ಧವಾಗಿದೆ. ಇದರಿಂದ ವ್ಯಾಪಾರಿಗಳು ಹಾಗೂ ಪ್ರಯಾಣಿಕರಿಗೆ ತುಂಬಾ ಅನುಕೂಲ ಆಗಲಿದೆ ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.