ಕರ್ನಾಟಕ

karnataka

ETV Bharat / state

ವಾರದಿಂದ ಸಂಪರ್ಕಕಕ್ಕೆ ಸಿಗದೇ ಸಂಕಷ್ಟ: ರಾಣಿ ಝರಿ ಬಳಿ ಸಿಲುಕಿದ್ದ ಆರು ಸಂತ್ರಸ್ತರ ರಕ್ಷಣೆ - ರಾಣಿ ಝರಿ ಫಾಲ್ಸ್

ಕಳೆದ ಒಂದು ವಾರದಿಂದ ಸಂಪರ್ಕಕಕ್ಕೆ ಸಿಗದೇ ಸಂಕಷ್ಟ ಅನುಭವಿಸಿದ್ದ 6 ಜನರನ್ನು ಸ್ಥಳೀಯರೇ ರಕ್ಷಿಸಿದ್ದಾರೆ. ಚಿಕ್ಕಮಗಳೂರಿನ ರಾಣಿ ಝರಿ ಫಾಲ್ಸ್​​ ಬಳಿ ಸಿಲುಕಿದ್ದ ಈ ಆರು ಮಂದಿಯನ್ನು ರಕ್ಷಿಸಿ ನಿರಾಶ್ರಿತರ ಕೇಂದ್ರಕ್ಕೆ ತಲುಪಿಸಲಾಗಿದೆ.

ರಾಣಿ ಝರಿ ಫಾಲ್ಸ್​​ ಬಳಿ ಸಿಲುಕಿದ್ದಂತಹ ಆರು ಜನರ ರಕ್ಷಣೆ

By

Published : Aug 14, 2019, 8:03 AM IST

Updated : Aug 14, 2019, 10:08 AM IST

ಚಿಕ್ಕಮಗಳೂರು: ಗುಡ್ಡ ಕುಸಿತ ಹಾಗೂ ನೆರೆಯಿಂದ ಸಂಪರ್ಕ ಕಳೆದುಕೊಂಡು ಜಿಲ್ಲೆಯ ರಾಣಿ ಝರಿ ಫಾಲ್ಸ್​​ ಬಳಿ ಸಿಲುಕಿದ್ದ ಆರು ಜನರನ್ನು ಸ್ಥಳೀಯರು ಪತ್ತೆ ಹಚ್ಚಿ, ರಕ್ಷಣೆ ಮಾಡಿದ್ದಾರೆ.

ರಾಣಿ ಝರಿ ಫಾಲ್ಸ್​​ ಬಳಿ ಸಂಕಷ್ಟಕ್ಕೆ ಸಿಲುಕಿದ್ದ ಆರು ಜನರ ರಕ್ಷಣೆ

ಕಳೆದ ಶುಕ್ರವಾರದಿಂದ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಲ್ಲಾಳರಾಯನ ಕೋಟೆ ಸಮೀಪದ ರಾಣಿ ಝರಿ ಬಳಿ ಇವರು ಸಿಲುಕಿಕೊಂಡಿದ್ದರು. ಹೊರ ಜಗತ್ತಿನೊಂದಿಗೆ ಸಂಪರ್ಕ ಸಾಧಿಸಲಾಗದೇ ಅಲ್ಲಿಯೇ ಉಳಿದುಕೊಂಡಿದ್ದರು.

ಸ್ಥಳೀಯರ ಕಾರ್ಯಾಚರಣೆಯಿಂದ ಈ ಆರು ಜನರನ್ನು ಪತ್ತೆ ಹಚ್ಚಲಾಗಿದ್ದು, ಅವರೆಲ್ಲರನ್ನೂ ದುರ್ಗದ ಹಳ್ಳಿಯಲ್ಲಿರುವ ನಿರಾಶ್ರಿತರ ಕೇಂದ್ರಕ್ಕೆ ಸುರಕ್ಷಿತವಾಗಿ ಕರೆತರಲಾಗಿದೆ.

Last Updated : Aug 14, 2019, 10:08 AM IST

ABOUT THE AUTHOR

...view details